ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿ.ಯು ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನಾಳೆ

Published 29 ಮಾರ್ಚ್ 2024, 5:49 IST
Last Updated 29 ಮಾರ್ಚ್ 2024, 5:49 IST
ಅಕ್ಷರ ಗಾತ್ರ

ಮಂಗಳೂರು: ನಗರದ ಕೂಳೂರಿನ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ಸಂಸ್ಥೆಯು ಪದವಿ ಪೂರ್ವ ಕಾಲೇಜಿನ ಬಳಿಕ ಲಭ್ಯ ಇರುವ ವೃತ್ತಿಪರ ಕೋರ್ಸ್‌ಗಳ ಬಗ್ಗೆ ಮಾರ್ಗದರ್ಶನ ನೀಡಲು ‘ಪಿ.ಯು. ನಂತರ ಮುಂದೇನು’ ಕಾರ್ಯಕ್ರಮವನ್ನು ಇದೇ 30 ರಂದು ಹಮ್ಮಿಕೊಂಡಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದ ಸಂಸ್ಥೆಯ ಡೀನ್ ಮತ್ತು ಪ್ರಾಂಶುಪಾಲ ಅರುಣ್ ಭಾಗವತ್, ‘ನಮ್ಮ ಸಂಸ್ಥೆಯ  ಪ್ರಾಂಗಣದಲ್ಲಿ ಇದೇ 30 ರಂದು ಬೆಳಗ್ಗೆ 10 ರಿಂದ ಕಾರ್ಯಕ್ರಮ ನಡೆಯಲಿದೆ. ಮಾರುಕಟ್ಟೆ, ಉದ್ಯಮ ಸಹಿತ ವಿವಿಧಕ್ಷೇತ್ರಗಳಲ್ಲಿ ಇರುವ ಬೇಡಿಕೆ, ಅತ್ಯುತ್ತಮ ವಿಷಯದ ಆಯ್ಕೆ ಹೇಗೆ, ಹೊಸ ತಲೆಮಾರಿನ ವಿವಿಧ ಕೋರ್ಸ್‌ಗಳ್ಯಾವುವು, ದೇಶವಿದೇಶಗಳಲ್ಲಿ ಹೆಚ್ಚು ಬೇಡಿಕೆ ಇರುವ ಕೋರ್ಸ್‌ಗಳು ಯಾವುವು ಎಂಬ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ಒದಗಿಸಲಿದ್ದಾರೆ’ ಎಂದರು.  
’ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಪ್ರಾಂಶುಪಾಲರ ಸಂಘದ ಮಾಜಿ ಅಧ್ಯಕ್ಷ ಕೆ.ಎನ್.ಗಂಗಾಧರ್ ಆಳ್ವ ಮತ್ತು ತೃಷಾ ವಿದ್ಯಾ ಪಿ.ಯು ಕಾಲೇಜಿನ ಪ್ರಾಂಶುಪಾಲ ಅನಂತ್ ಪೈ ಅತಿಥಿಗಳಾಗಿ ಭಾಗವಹಿಸುವರು’ ಎಂದು ತಿಳಿಸಿದರು.


ಕಾರ್ಯಕ್ರಮದ ಸಂಯೋಜಕಿ ದೀಪಾಲಿ ಶೆಣೈ, ವಿಭಾಗ ಮುಖ್ಯಸ್ಥೆ ಶಕೀನಾ, ಸಾಕ್ಷ್ಯಾ ಶೆಟ್ಟಿ, ಭರತ್ ಎನ್.ಕೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT