ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ಅಲ್ಪ ಬಳಕೆಯ ಬಟ್ಟೆ ಅಗ್ಗದ ದರಕ್ಕೆ ಬಿಕರಿ

Published 13 ಮೇ 2024, 3:15 IST
Last Updated 13 ಮೇ 2024, 3:15 IST
ಅಕ್ಷರ ಗಾತ್ರ

ಮಂಗಳೂರು: ಅಲ್ಪ ಮಾತ್ರ ಬಳಕೆಯಾದ ದುಬಾರಿ ಬ್ರ್ಯಾಂಡೆಡ್ ಬಟ್ಟೆಗಳನ್ನು ಪಡೆದು, ಅಗ್ಗದ ದರಕ್ಕೆ ಮಾರಾಟ ಮಾಡಿ ನೇಕಾರರ ಸಮುದಾಯಕ್ಕೆ ನೆರವಾಗಲು ‘ಒಹಾನ ಕಮ್ಯುನಿಟಿ’ ಇಲ್ಲಿನ ಮಣ್ಣಗುಡ್ಡೆಯ ವರ್ಟೆಕ್ಸ್‌ ಲಾಂಜ್‌ನಲ್ಲಿ ಭಾನುವಾರ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.

ಇದರ ಜೊತೆಗೆ ಸುಸ್ಥಿರ ಜೀವನ ಶೈಲಿಯನ್ನು ಉತ್ತೇಜಿಸಲು ಸಾವಯವ ಉತ್ಪನ್ನಗಳ ಮಾರಾಟವೂ ನಡೆಯಿತು. ಕರದಲ್ಲಿ ತಯಾರಿಸಿ ಮೊಂಬತ್ತಿ, ಹತ್ತಿಬಟ್ಟೆಯ ಉಡುಪುಗಳು, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿಗೂ ಅವಕಾಶ ಕಲ್ಪಿಸಲಾಗಿತ್ತು. 

‘ಅನೇಕ ದುಬಾರಿ ದರ ತೆತ್ತು ಖರೀದಿಸುವ ಬಟ್ಟೆಗಳನ್ನು ಒಮದೆರಡು ಸಲ ಬಳಸಿ ಬಿಸಾಡುತ್ತಾರೆ. ಇಲ್ಲವೋ ಅವು ವಾರ್ಡ್‌ರೋಬ್‌ಗಳಲ್ಲಿ ಹಾಗೆಯೇ ಬಿದ್ದಿರುತ್ತವೆ. ಇನ್ನೊಂದೆಡೆ ಎಷ್ಟೋ ಮಂದಿಗೆ ಬಟ್ಟೆ ಖರೀದಿಸುವ ಸಾಮರ್ಥ್ಯವೇ ಇರುವುದಿಲ್ಲ. ಅಂತಹವರಿಗೆ ಗುಣಮಟ್ಟದ ಬಟ್ಟಗಳನ್ನು ಅಗ್ಗದ ದರದಲ್ಲಿ ಒದಗಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದು ಒಹಾನ ಕಮ್ಯುನಿಟಿಯ ಸಂಸ್ಥಾಪಕಿ ಅಲಕಾ ಮನೋಜ್‌ ‘ಪ್ರಜಾವಾಣಿ‘ಗೆ ತಿಳಿಸಿದರು.

‘ಈ ಕಾರ್ಯಕ್ರಮದಿಂದ ಬರುವ ವರಮಾನವನ್ನು ನೇಕಾರರ ಸಮುದಾಯದ ನೆರವಿಗೆ ಬಳಸುತ್ತೇವೆ. ಕದಿಕೆ ಟ್ರಸ್ಟ್‌ ನಮ್ಮ ಜೊತೆ ಕೈಜೋಡಿಸಿದೆ. ಈ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಸಂಸ್ಥೆಯ ಸಹಸಂಸ್ಥಾಪಕಿ ಅಂಜಲಿ ಮಾಹಿತಿ ನೀಡಿದರು.

ಚಿಣ್ಣರಿಗೆ ಕಸದಿಂದ ರಸ, ಕೊಲಾಜ್‌ ತಯಾರಿ, ಮೊದಲಾದ ಚಟುವಟಿಕೆಗಳು ಹಾಗೂ ಸಂಗೀತ ರಸಸಂಜೆ ಕಾರ್ಯಕ್ರಮವೂ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT