ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕರಾವಳಿ ಕ್ರೀಡೆಗೆ ಇನ್ನಷ್ಟು ‘ಸ್ಮಾರ್ಟ್’ ಸೌಲಭ್ಯ

ಟರ್ಫ್‌ನಲ್ಲಿ ಕಂಗೊಳಿಸಲಿರುವ ನೆಹರು ಮೈದಾನದ ಫುಟ್‌ಬಾಲ್‌ ಅಂಗಣ; ಉರ್ವದಲ್ಲಿ ಬ್ಯಾಡ್ಮಿಂಟನ್, ಕಬಡ್ಡಿ ಸಂಕೀರ್ಣ ಸಿದ್ಧ
Published : 19 ಮೇ 2025, 6:23 IST
Last Updated : 19 ಮೇ 2025, 6:23 IST
ಫಾಲೋ ಮಾಡಿ
Comments
ಆಸ್ಟ್ರೊ ಟರ್ಫ್ ಹಾಸಿದ ನಂತರ ನೆಹರು ಮೈದಾನದ ಪರಿಸ್ಥಿತಿಯೇ ಬದಲಾಗಲಿದೆ. ಹೆಚ್ಚು ಪಂದ್ಯಗಳು ನಡೆಯುವ ಸಾಧ್ಯತೆ ಇದೆ. ಗಾಯದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ನನಗೆ ಟರ್ಫ್‌ ಇರುವ ಮೈದಾನದಲ್ಲಿ ಆಡಿ ನೆಹರು ಮೈದಾನದಲ್ಲಿ ಆಡುವಾಗ ತುಂಬ ಕಷ್ಟ ಆಗುತ್ತಿತ್ತು. ಇನ್ನು ಮುಂದೆ ಇಲ್ಲಿಯೂ ಖುಷಿಯಿಂದ ಆಡಬಹುದು.
ಮುಹಮ್ಮದ್ ಅಸ್ಲಾಂ, ಫುಟ್‌ಬಾಲ್ ಆಟಗಾರ, ಯೆನೆಪೋಯ ಕಾಲೇಜು ಎಂಬಿಎ ವಿದ್ಯಾರ್ಥಿ 
ಟರ್ಫ್ ಅಂಗಣದಲ್ಲೂ ಗಾಯಗಳಾಗುವ ಸಾಧ್ಯತೆ ಇದೆ. ಮೊಣಕಾಲಿಗೆ ಹೆಚ್ಚು ಪೆಟ್ಟು ಬೀಳುವುದು ಇಂಥ ಅಂಗಣದಲ್ಲೇ. ಆದ್ದರಿಂದ ಸರಿಯಾದ ನಿರ್ವಹಣೆ ಬಹಳ ಮುಖ್ಯ. ಟರ್ಫ್‌ ಹಾಸಿದ ನಂತರ ಆಟಗಾರರ ಉತ್ಸಾಹ ಹೆಚ್ಚಲಿದೆ. ಅಭ್ಯಾಸ ಮಾಡಲು ಹೆಚ್ಚು ಅನುಕೂಲ ಆಗಲಿದೆ. ಇದು ಮಂಗಳೂರಿನ ಫುಟ್‌ಬಾಲ್‌ಗೆ ಸಂಬಂಧಿಸಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ. ಮಣ್ಣಿನ ಅಂಗಣದಲ್ಲಿ ಆಡುತ್ತಿದ್ದ ಜಾಗದಲ್ಲಿ ಟರ್ಫ್‌ಗೆ ಇಳಿಯಲು ಉತ್ಸುಕನಾಗಿದ್ದೇನೆ.  
ಸಚಿನ್ ಸುನಿಲ್‌, ಫುಟ್‌ಬಾಲ್ ಆಟಗಾರ, ಕ್ರೀಡಾ ಅಧ್ಯಯನ ವಿದ್ಯಾರ್ಥಿ
ಟರ್ಫ್ ಹಾಸಬೇಕೆಂಬುದು ಬಹುಕಾಲದ ಕನಸಾಗಿತ್ತು. ಅದು ಈಗ ನನಸಾಗುತ್ತಿದೆ. ಮಣ್ಣಿನ ಅಂಗಣದಲ್ಲಿ ಆಡುವ ಹುಡುಗರು ಬೇರೆ ಜಿಲ್ಲೆಗಳಿಗೆ ಅಥವಾ ದೊಡ್ಡ ನಗರಗಳಿಗೆ ಹೋಗಿ ಪಂದ್ಯಗಳಲ್ಲಿ ಆಡುವುದು ಕಷ್ಟವಾಗುತ್ತಿತ್ತು. ಇನ್ನು ಮುಂದೆ ಟರ್ಫ್‌ನಲ್ಲೇ ಅಭ್ಯಾಸ ಮಾಡಿ ಟರ್ಫ್ ಅಂಗಣದಲ್ಲೇ ಆಡಬಹುದು. ದೊಡ್ಡ ಟೂರ್ನಿಗಳಿಗೆ ಸಜ್ಜಾಗಲು ಉತ್ತಮ ಅವಕಾಶ ಆಗಲಿದೆ. 
ಡಿ.ಎಂ. ಅಸ್ಲಾಂ, ದಕ್ಷಿಣ ಕನ್ನಡ ಜಿಲ್ಲಾ ಫುಟ್‌ಬಾಲ್ ಸಂಸ್ಥೆಯ ಅಧ್ಯಕ್ಷ
ಬ್ಯಾಡ್ಮಿಂಟನ್ ಟೂರ್ನಿಗಳ ಆಯೋಜನೆಗೆ ಮತ್ತು ಅಭ್ಯಾಸಕ್ಕೆ ಅತ್ಯುತ್ತಮ ಸೌಲಭ್ಯ ಮಂಗಳೂರಿನಲ್ಲಿ ಅತ್ಯವಶ್ಯಕವಾಗಿತ್ತು. ಇನ್ನು ಮುಂದೆ ವಸತಿ ಸಹಿತ ತರಬೇತಿ ಶಿಬಿರಗಳಿಗೆ ಅನುಕೂಲ ಆಗಲಿದೆ. ಕ್ರೀಡಾ ಸಂಕೀರ್ಣ ಸಮರ್ಪಕವಾಗಿ ಬಳಕೆ ಆಗಬೇಕು. ಕ್ರೀಡಾಪಟುಗಳಿಗೆ ಅನುಕೂಲ ಆಗುವಂತಿರಬೇಕೇ ಹೊರತು ರಾಜಕೀಯ ಮೇಲಾಟದ ಕೇಂದ್ರ ಆಗಬಾರದು. ಹಾಗೇನಾದರೂ ಆದರೆ ಕ್ರೀಡಾಪಟುಗಳ ಪರವಾಗಿ ಹೋರಾಟ ಮಾಡುವುದು ಅನಿವಾರ್ಯ ಆಗುತ್ತದೆ.
ಗಣೇಶ್ ಪ್ರಸಾದ್, ದಕ್ಷಿಣ ಕನ್ನಡ ಜಿಲ್ಲಾ ಬ್ಯಾಡ್ಮಿಂಟನ್‌ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯ
ಮಂಗಳೂರಿನ ನೆಹರು ಮೈದಾನದ ಫುಟ್‌ಬಾಲ್ ಅಂಗಣದಲ್ಲಿ ಆಸ್ಟ್ರೊ ಟರ್ಫ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ

ಮಂಗಳೂರಿನ ನೆಹರು ಮೈದಾನದ ಫುಟ್‌ಬಾಲ್ ಅಂಗಣದಲ್ಲಿ ಆಸ್ಟ್ರೊ ಟರ್ಫ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ

ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್

ಮಂಗಳೂರಿನ ಉರ್ವದಲ್ಲಿ ನಿರ್ಮಾಣವಾಗಿರುವ ಬ್ಯಾಡ್ಮಿಂಟನ್ ಕ್ರೀಡಾಂಗಣ

ಮಂಗಳೂರಿನ ಉರ್ವದಲ್ಲಿ ನಿರ್ಮಾಣವಾಗಿರುವ ಬ್ಯಾಡ್ಮಿಂಟನ್ ಕ್ರೀಡಾಂಗಣ 

ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್

ಮಂಗಳೂರಿನ ಉರ್ವದಲ್ಲಿ ನಿರ್ಮಾಣವಾಗಿರುವ ಬ್ಯಾಡ್ಮಿಂಟನ್ ಮತ್ತು ಕಬಡ್ಡಿ ಕ್ರೀಡಾ ಸಂಕೀರ್ಣ

ಮಂಗಳೂರಿನ ಉರ್ವದಲ್ಲಿ ನಿರ್ಮಾಣವಾಗಿರುವ ಬ್ಯಾಡ್ಮಿಂಟನ್ ಮತ್ತು ಕಬಡ್ಡಿ ಕ್ರೀಡಾ ಸಂಕೀರ್ಣ

ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT