ಮಂಗಳೂರು: ‘ಕೆಲವು ಶಕ್ತಿಗಳಿಗೆ ಸಂವಿಧಾನ ಒಂದು ಟೂಲ್ (ಸಾಧನ) ಆಗಿ ಬಿಟ್ಟಿದೆ. ಸಂವಿಧಾನವನ್ನು ಟೂಲ್ ತರಹ ಬಳಸುವುದಕ್ಕೆ ನಾವು ಬಿಡುವುದಿಲ್ಲ’ ಎಂದು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.

ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ವತಿಯಿಂದ ಶನಿವಾರ ಇಲ್ಲಿ ಏರ್ಪಡಿಸಿದ್ದ ‘ಸಂವಿಧಾನ ಸನ್ಮಾನ’ ಕಾರ್ಯಕ್ರಮದಲ್ಲಿ, ವಿಖ್ಯಾತ್ ಪಿ. ಅವರು ರಚಿಸಿರುವ ‘ಸಂವಿಧಾನವನ್ನು ಬದಲಾಯಿಸಿದ್ದು ಯಾರು?’ ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

‘ಸಂವಿಧಾನ ತಾಯಿ ಇದ್ದಂತೆ. ತಾಯಿಗೂ ಮಗುವಿಗೂ ದೈವಿಕ ಸಂಬಂಧವಿದೆ. ಮಗುವಿಗೆ ತಾಯಿ ಯಾವತ್ತೂ ಒಂದು ಸಾಧನ ಆಗಬಾರದು. ಮಗ ತಾಯಿಯನ್ನು ಟೂಲ್ ತರ ಬಳಸಿದರೆ ದೇವರೂ ಕ್ಷಮಿಸುವುದಿಲ್ಲ. ಹಿಂದೆಲ್ಲ ಸಂವಿಧಾನವನ್ನು ಟೂಲ್ ಆಗಿ ಬಳಸಿ ಕೆಲವರು ಲಾಭ ಪಡೆದಿದ್ದರು. ಈಗ ಜನರಿಗೆ ಆ ರೀತಿ ಮೋಸ ಮಾಡಲು ಸಾಧ್ಯವಿಲ್ಲ. ಈಗಿನ ಮಾಧ್ಯಮ, ಸಾಮಾಜಿಕ ಮಾಧ್ಯಮ, ಜನರ ಮನಃಸ್ಥಿತಿ ಅದಕ್ಕೆ ಅವಕಾಶ ಕೊಡುವುದಿಲ್ಲ’ ಎಂದರು.

‘ದೇಶದ ಸಂವಿಧಾನವನ್ನೇ ಚುನಾವಣಾ ಸರಕನ್ನಾಗಿ ಮಾಡಿದ್ದು ಶೋಚನೀಯ. ಬಿಜೆಪಿಯವರು ಸಂವಿಧಾನವನ್ನು ಬದಲಾಯಿಸುತ್ತಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ನಿಜಕ್ಕೂ ಅದನ್ನು ಬದಲಾಯಿಸಿದ್ದು ಯಾರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸಂವಿಧಾನಕ್ಕೆ 106 ಸಲ ತಿದ್ದುಪಡಿ ತರಲಾಗಿದೆ. ಅದರಲ್ಲಿ 75 ಸಲ ತಿದ್ದುಪಡಿ ತಂದಿದ್ದು ಕಾಂಗ್ರೆಸ್ ನೇತೃತ್ವದ ಸರ್ಕಾರಗಳು. ಅಂಬೇಡ್ಕರ ಆಶಯಗಳನ್ನು ಎತ್ತಿಹಿಡಿಯಲು ತಿದ್ದುಪಡಿ ತಂದಿದ್ದು ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮಾತ್ರ’ ಎಂದರು.

‘ಸಂವಿಧಾನಕ್ಕೆ ಮೂಲ ರಚನೆಯೇ ಇಲ್ಲ ಎಂದು ಕಾಂಗ್ರೆಸ್ ಪ್ರತಿಪಾದಿಸಿತ್ತು. ಸಂವಿಧಾನದ ಮೇಲೆ ಕಾಂಗ್ರೆಸ್ ಅತಿಕ್ರಮಣ ಮಾಡಿತ್ತು ಎಂಬ ಶಬ್ದವನ್ನು ಕೆಲವರು ಬಳಸುತ್ತಾರೆ. ಆದರೆ, ಸಂವಿಧಾನದ ಮೇಲೆ ಅತ್ಯಾಚಾರವನ್ನೇ ಮಾಡಿತ್ತು ಎಂಬ ಶಬ್ದವನ್ನು ಉಪಯೋಗಿಸುವುದೇ ಸೂಕ್ತ’ ಎಂದರು.

ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿಯ ವಿಭಾಗ ಮುಖ್ಯಸ್ಥ ಹೃಷಿಕೇಶ್ ಅಮೀನ್, ಕೃತಿಯ ಲೇಖಕ ವಿಕಾಸ್ ಪಿ. ಹಾಗೂ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಾಜೀವ ಪಿ. ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.