ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು, ನ್ಯಾಯಾಲಯದ ಅನುಮತಿ ಪಡೆದು ಪ್ರಕರಣದ ಸಾಕ್ಷಿ ದೂರುದಾರ
ನನ್ನು ಶಿವಮೊಗ್ಗದ ಜೈಲಿನಲ್ಲಿ ವಿಚಾರಣೆ ನಡೆಸಿದ್ದಾರೆ.

ಪ್ರಕರಣದ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ನೇತೃತ್ವದಲ್ಲಿ ಎಸ್ಐಟಿ ಅಧಿಕಾರಿಗಳು ಎರಡು ದಿನಗಳ ಕಾಲ ಶಿವಮೊಗ್ಗದಲ್ಲೇ ಉಳಿದುಕೊಂಡು ಸಾಕ್ಷಿ ದೂರುದಾರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ನ್ಯಾಯಾಲಯದ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.

‘ವಿಚಾರಣೆ ವೇಳೆ, ಸಾಕ್ಷಿ ದೂರುದಾರನಿಂದ ಅನೇಕ ಹೊಸ ಮಾಹಿತಿಗಳನ್ನು ಎಸ್ಐಟಿ ಕಲೆಹಾಕಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್ಎಸ್ಎಸ್) ಸೆಕ್ಷನ್ 183ರ ಅಡಿ ಸಾಕ್ಷಿ ದೂರುದಾರ ನ್ಯಾಯಾಧೀಶರ ಸಮ್ಮುಖದಲ್ಲಿ ನೀಡಿದ್ದ ಹೇಳಿಕೆಯಲ್ಲಿ ಹಾಗೂ ಎಸ್ಐಟಿ ತನಿಖೆ ವೇಳೆ ಉಲ್ಲೇಖಿಸಿದ್ದಂತೆ, ಆತ ಈ ಹಿಂದೆ 10 ಮೃತದೇಹಗಳನ್ನು ಹೂತುಹಾಕಿರುವ ಕುರಿತ ಮಹತ್ವದ ಮಾಹಿತಿಗಳನ್ನು ಅಧಿಕಾರಿಗಳು ಕಲೆಹಾಕಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಮುಂದಿನ ಹಂತದ ತನಿಖೆಯನ್ನು ನಿರ್ವಹಿಸಲು ಅಗತ್ಯವಿರುವ ಸಾಕಷ್ಟು ಪುರಾವೆ ಲಭ್ಯ
ವಾಗಿದೆ. ಆತನ ವಿಚಾರಣೆ ಪೂರ್ಣಗೊಂಡಿದೆ. ಹೆಚ್ಚುವರಿ ಮಾಹಿತಿ, ಸ್ಪಷ್ಟನೆಯ ಅಗತ್ಯ ಬಿದ್ದರೆ ಎಸ್ಐಟಿಯು ಕೋರ್ಟ್ ಅನುಮತಿ ಪಡೆದು ಸಾಕ್ಷಿ ದೂರುದಾರನನ್ನು ಮತ್ತೆ ವಿಚಾರಣೆಗೆ ಒಳಪಡಿಸಲಿದೆ’ ಎಂದು ಮೂಲಗಳು ಹೇಳಿವೆ.

ತನಿಖೆಯ ಮುಂದಿನ ಹಂತದಲ್ಲಿ ಇದುವರೆಗಿನ ವಿಚಾರಣೆ ವೇಳೆ ಕಲೆ ಹಾಕಿರುವ ಮಾಹಿತಿಗಳನ್ನು ಖಾತರಿಪಡಿಸಿಕೊಳ್ಳುವುದಕ್ಕೆ ಹಾಗೂ ಅವುಗಳ ವಿಶ್ಲೇಷಣೆಗೆ ಗಮನ ವಹಿಸಲಾಗುತ್ತದೆ. ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ 10 ಸಾವುಗಳು ಅಥವಾ ಮೃತದೇಹ ಹೂತು ಹಾಕಿದ ಪ್ರಕರಣಗಳು ಅಸಹಜ ಸಾವುಗಳು ಹೌದೋ ಅಲ್ಲವೋ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸಲಿದ್ದಾರೆ. ಈ ಸಲುವಾಗಿ ಎಸ್ಐಟಿ ಕೆಲ ಪೊಲೀಸ್ ಸಿಬ್ಬಂದಿಯನ್ನು, ವೈದ್ಯಕೀಯ ಅಧಿಕಾರಿಗಳನ್ನು ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದ ಇತರರನ್ನು ವಿಚಾರಣೆಗೆ ಒಳಪಡಿಸಲಿದೆ ಎಂದು ಗೊತ್ತಾಗಿದೆ.

‘ವಿಚಾರಣೆ ಸಂದರ್ಭದಲ್ಲಿ ನಮಗೆ ಕೆಲವು ಬಲವಾದ ಸುಳಿವುಗಳು ಸಿಕ್ಕಿವೆ. ಇವು ಮುಂದಿನ ಹಂತದ ತನಿಖೆಯಲ್ಲಿ ಉಪಯುಕ್ತವಾಗಲಿದೆ’ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
.ಧರ್ಮಸ್ಥಳ ಪ್ರಕರಣ: ಸಾಕ್ಷಿ ದೂರುದಾರನ ವಿಚಾರಣೆಗೆ ಅನುಮತಿ.ಧರ್ಮಸ್ಥಳ ಪ್ರಕರಣ | ಮತ್ತೆ ಸಾಕ್ಷಿದೂರುದಾರನ ವಿಚಾರಣೆ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.