ಉಜಿರೆ: ನವರಾತ್ರಿ ಅಂಗವಾಗಿ ಧರ್ಮಸ್ಥಳದಲ್ಲಿ ಸೆ.22ರಿಂದ ಅ.1ರವರೆಗೆ ವಿಶೇಷಪೂಜೆ, ಪ್ರತಿದಿನ ಸಂಜೆ 6ರಿಂದ ಪ್ರವಚನ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಸೆ.22ರಂದು ಮಾಸ್ಟರ್ ಅಶ್ಮಿತ್ ಮಂಗಳೂರು (ಭಕ್ತಿಸಂಗೀತ), 23ರಂದು ವಿದ್ಯಾ ಎಸ್.ರಾವ್ ಬಳಗ ಉಡುಪಿ (ಶಾಸ್ತ್ರೀಯ ಸಂಗೀತ), 24ರಂದು ಅನಘಾ ಅವಧೂತ್ ಬೆಳಗಾವಿ (ಸಿತಾರ್ ವಾದನ), 25ರಂದು ಶ್ರೀವಿದ್ಯಾ ಉಜಿರೆ (ಶಾಸ್ತ್ರೀಯ ಸಂಗೀತ), 26ರಂದು ಸಿಂಚನಾ ಎಂ.ಗೌಡ ಬಳಗ ಪುತ್ತೂರು (ಭಕ್ತಿ ರಸಮಂಜರಿ), 27ರಂದು ಚಂದ್ರಿಕಾ ರಾಜಾರಾಮ್ ಬೆಂಗಳೂರು (ಶಾಸ್ತ್ರೀಯ ಸಂಗೀತ), 28ರಂದು ಅನುರಾಧ ಭಟ್ ಅಡ್ಕಸ್ಥಳ, ಕೇಪು, ವಿಟ್ಲ (ಶಾಸ್ತ್ರೀಯ ಸಂಗೀತ), 29ರಂದು ಶ್ರೀಲಕ್ಷ್ಮಿ ಬೆಳ್ಮಣ್ಣು, ಬೆಂಗಳೂರು (ಶಾಸ್ತ್ರೀಯ ಸಂಗೀತ), 30ರಂದು ನವ್ಯ ಎಂ.ಆರ್. ಮತ್ತು ಬಳಗ ಪುತ್ತೂರು (ಸುಗಮ ಸಂಗೀತ), ಅ.1ರಂದು ಆರಾಧ್ಯ ರಾವ್ ಬೆಂಗಳೂರು ಅವರಿಂದ ಭಕ್ತಿ ರಸಮಂಜರಿ (ಸಂಜೆ 6.30ರಿಂದ 8.30ರವರಗೆ), ಕ್ಷಿತಿ ರೈ ಧರ್ಮಸ್ಥಳ ಅವರಿಂದ ರಾತ್ರಿ 9ರಿಂದ 11.30ರವರೆಗೆ ಸುಗಮ ಸಂಗೀತ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಸೆ.21ರಂದು ವಿದ್ಯಾ ಪ್ರೋತ್ಸಾಹಧನ ವಿತರಣೆ

ಉಜಿರೆ: ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ಜೈನತೀರ್ಥ ಕ್ಷೇತ್ರಕ್ಕೆ ಹೊಂಬುಜ ಜೈನಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಸೆ.21ರಂದು ಭೇಟಿ ನೀಡಲಿದ್ದು, ಕೀರ್ತಿಶೇಷ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿ 700 ವಿದ್ಯಾರ್ಥಿಗಳಿಗೆ ₹ 25 ಲಕ್ಷ ಮೊತ್ತದ ವಿದ್ಯಾರ್ಥಿ ಪ್ರೋತ್ಸಾಹಧನ ವಿತರಿಸಲಿದ್ದಾರೆ ಎಂದು ಬಸದಿಯ ಅನುವಂಶಿಕ ಆಡಳಿತ ಮೊಕ್ತೇಸರ ಕೆ.ಜಯವರ್ಮರಾಜ್ ಬಳ್ಳಾಲ್ ತಿಳಿಸಿದ್ದಾರೆ.

ಬಸದಿ ಆಡಳಿತ ಮೊಕ್ತೇಸರರಾಗಿದ್ದ ಕೆಲ್ಲಗುತ್ತು ಸಬ್ರಬೈಲು ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಅವರ ವಾರ್ಷಿಕ ಸ್ಮರಣಾರ್ಥ ಸಂಬಂಧ ಅಂದು ಬೆಳಿಗ್ಗೆ 7ರಿಂದ ಭಗವಾನ್ ಶಾಂತಿನಾಥ ಸ್ವಾಮಿ ಬಸದಿಯಲ್ಲಿ ಕಲಶಾಭಿಷೇಕ, ಮೂರು ಬಸದಿಗಳಲ್ಲಿ ನವಕಲಶಾಭಿಷೇಕ, ಮಹಾಪೂಜೆ ಮತ್ತು ಪದ್ಮಾವತಿ ಅಮ್ಮನವರಿಗೆ ಅಲಂಕಾರಪೂಜೆ ನಡೆಯಲಿದೆ.

ಮಧ್ಯಾಹ್ನ 3 ಗಂಟೆಯಿಂದ ಸ್ವಾಮೀಜಿ ವಿದ್ಯಾರ್ಥಿ ಪ್ರೋತ್ಸಾಹಧನ ವಿತರಿಸುವರು. ಬಸದಿಯ ಅನುವಂಶಿಕ ಆಡಳಿತ ಮೊಕ್ತೇಸರ ಕೆ.ಜಯವರ್ಮರಾಜ್ ಬಳ್ಳಾಲ್ ಅಧ್ಯಕ್ಷತೆ ವಹಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.