ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಆರ್‌ಪಿಎಲ್‌ನಲ್ಲಿ ಡಾ.ಅಂಬೇಡ್ಕರ್‌ ಮೂರ್ತಿ ಅನಾವರಣ

Last Updated 18 ಆಗಸ್ಟ್ 2020, 5:43 IST
ಅಕ್ಷರ ಗಾತ್ರ

ಮಂಗಳೂರು: ಎಂಆರ್‌ಪಿಎಲ್‌ನಲ್ಲಿ 74 ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಧ್ವಜಾರೋಹಣ ಮಾಡಿದ ಎಂಆರ್‌ಪಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್‌, ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಮೂರ್ತಿಯನ್ನು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಂ. ವೆಂಕಟೇಶ್‌, ‘ಕೋವಿಡ್‌–19 ನಿರ್ವಹಣೆಯಲ್ಲಿ ಹೋರಾಡುತ್ತಿರುವ ಕೊರೊನಾ ವಾರಿಯರ್‌ಗಳ ಸೇವೆ ಶ್ಲಾಘನೀಯ. ಕೋವಿಡ್‌ ಸಂದರ್ಭದಲ್ಲಿ ಕಂಪನಿಯು ಹಲವಾರು ಸವಾಲುಗಳನ್ನು ಎದುರಿಸಿದ್ದು, ಅದೇ ರೀತಿ ಮಾರುಕಟ್ಟೆಯಲ್ಲಿ ಅನೇಕ ಅವಕಾಶಗಳನ್ನು ಪಡೆದಿದೆ. ರಿಟೇಲ್‌ ಮಳಿಗೆಗಳನ್ನು ಆರಂಭಿಸುವ ಮೂಲಕ ಮಾರುಕಟ್ಟೆ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ಎಂಎಸ್‌ಎಸ್‌ಇಡಬ್ಲ್ಯುಎ ಜಂಟಿ ಕಾರ್ಯದರ್ಶಿ ಲತಾಕುಮಾರಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಮೂರ್ತಿಯನ್ನು ಅನಾವರಣಗೊಳಿಸುವ ಮೂಲಕ ಎಂಆರ್‌ಪಿಎಲ್‌ ಮಹತ್ತರ ಕಾರ್ಯ ಮಾಡಿದೆ ಎಂದರು.

ರಿಫೈನರಿ ನಿರ್ದೇಶಕ ಸಂಜಯ ವರ್ಮಾ, ಮುಖ್ಯ ಜಾಗೃತ ಅಧಿಕಾರಿ ರಾಜೀವ್‌ ಕುಶ್ವಾ, ರಿಫೈನರಿ ಕಾರ್ಯಕಾರಿ ನಿರ್ದೇಶಕ ಇಳಾಂಗೋ ಎಂ., ಯೋಜನಾ ವಿಭಾಗದ ಕಾರ್ಯಕಾರಿ ನಿರ್ದೇಶಕ ಬಿ.ಎಚ್‌.ವಿ. ಪ್ರಸಾದ್‌ ಇದ್ದರು. ಹಣಕಾಸು ವಿಭಾಗದ ನಿರ್ದೇಶಕಿ ಪೊಮಿಲಾ ಜಸ್ಪಾಲ್‌ ನವದೆಹಲಿಯಿಂದ ಆನ್‌ಲೈನ್‌ ಮೂಲಕ ಪಾಲ್ಗೊಂಡಿದ್ದರು.

ಮುಖ್ಯ ಸಮೂಹ ಮಹಾಪ್ರಬಂಧಕ ಬಿ.ರಮೇಶ್‌ ಕುಮಾರ್‌ ಮಾತನಾಡಿದರು. ಬಿ.ಎಚ್‌.ವಿ. ಪ್ರಸಾದ್‌ ಎಂಆರ್‌ಪಿಎಲ್‌ ಅಧ್ಯಕ್ಷ ಶಶಿಶಂಕರ್ ಅವರ ಸಂದೇಶ ವಾಚಿಸಿದರು. ಆಡಳಿತ ವಿಭಾಗದ ಸಹಾಯಕ ಮಹಾಪ್ರಬಂಧಕ ಮಂಜುನಾಥ ಎಚ್‌.ವಿ. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT