‘ಕೆರೆ: ಅಭಿವೃದ್ಧಿ ನಿರ್ವಹಣೆಗೆ ಕ್ರಮ’
ಪಾಲಿಕೆ ವ್ಯಾಪ್ತಿಯಲ್ಲಿ ಕೆಲವು ಕೆರೆಗಳು ಕೆಟ್ಟ ಸ್ಥಿತಿಯಲ್ಲಿರುವುದು ಹಾಗೂ ಅಭಿವೃದ್ಧಿಗೊಂಡಿರುವ ಕೆಲವು ಕೆರೆಗಳ ನಿರ್ವಹಣೆಯೂ ಸರಿಯಾಗಿ ಆಗುತ್ತಿಲ್ಲ ಎಂಬ ಅಂಶ ಗಮನಕ್ಕೆ ಬಂದಿದೆ. ಕೆರೆಗಳ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಪಾಲಿಕೆಯ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ರವಿಚಂದ್ರ ನಾಯಕ್ ಪಾಲಿಕೆ ಆಯುಕ್ತ –0– ‘ಕೆರೆ ಅಭಿವೃದ್ಧಿಗೆ ನೆರವಾಗಲು ಮುಡಾ ಬದ್ಧ’ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಬಡಾವಣೆಗಳಿಗೆ ಮಂಜೂರಾತಿ ನೀಡುವಾಗ ಕೆರೆ ಅಭಿವೃದ್ಧಿ ಸೆಸ್ ಸಂಗ್ರಹಿಸುತ್ತದೆ. ಈ ಮೊತ್ತವನ್ನು ಕೆರೆಗಳ ಅಭಿವೃದ್ಧಿಗೆ ಬಳಸಲಾಗುತ್ತದೆ. ಅಭಿವೃದ್ಧಿಪಡಿಸಿದ ಬಳಿಕ ಆಯಾ ಕೆರೆಯ ನಿರ್ವಹಣೆ ಪಾಲಿಕೆ ಅಥವಾ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಯದು. ಪಾಲಿಕೆ ವ್ಯಾಪ್ತಿಯಲ್ಲಿ ಕೆರೆಗಳ ಅಭಿವೃದ್ಧಿಗೆ ಅನುದಾನ ಒದಗಿಸಲು ಮುಡಾ ಬದ್ಧ. ಆದರೆ ನಿರ್ವಹಣೆಯ ಹೊಣೆಯನ್ನು ನಾವು ವಹಿಸಿಕೊಳ್ಳಲಾಗದು. ನೂರ್ ಜಹರಾ ಖಾನಮ್ ಆಯುಕ್ತರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ