ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿಡ್ಡೋಡಿಯಲ್ಲಿ ಮೀನಿನ ತ್ಯಾಜ್ಯ: ಗ್ರಾಮಸ್ಥರ ವಿರೋಧ 

Published 13 ಆಗಸ್ಟ್ 2024, 13:51 IST
Last Updated 13 ಆಗಸ್ಟ್ 2024, 13:51 IST
ಅಕ್ಷರ ಗಾತ್ರ

ಮೂಡುಬಿದಿರೆ: ಮಂಗಳೂರಿನ ಮೀನಿನ ಕಾರ್ಖಾನೆಯೊಂದರಿಂದ ಕೊಳೆತ ಆಹಾರವನ್ನು ನಿಡ್ಡೋಡಿಯ ಕೊಲೆತ್ತರಪದವು ಎಂಬಲ್ಲಿ ಹಾಕುವುದಕ್ಕೆ ಸ್ಥಳೀಯರು ವಿರೋಧಿಸಿ ತಡೆಯೊಡ್ಡಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಬಂಗೇರಪದವಿನ ಕೊಲೆತ್ತರಪದವು ಎಂಬಲ್ಲಿ ಗಂಜಿಮಠದ ಗಾಡ್ಫ್ರೆ ಕ್ರಾಸ್ತಾ ಎಂಬುವರಿಗೆ ಸೇರಿದ ಕೆಂಪು ಕಲ್ಲಿನ ಕ್ವಾರಿಗೆ ಕೆಲವು ದಿನಗಳಿಂದ ವಾಹನದಲ್ಲಿ ಕೊಳೆತ ಮೀನಿನ ಆಹಾರವನ್ನು ರಹಸ್ಯವಾಗಿ ತಂದು ಹಾಕಲಾಗುತ್ತಿತ್ತು. ಸೋಮವಾರ ರಾತ್ರಿ ಕೊಳೆತ ಆಹಾರವನ್ನು ತರುತ್ತಿದ್ದ ಟೆಂಪೊವನ್ನು ಹಿಂಬಾಲಿಸಿದ ಗ್ರಾಮಸ್ಥರು ಕೊಲೆತ್ತರಪದವಿನಲ್ಲಿ ವಿಲೇವಾರಿ ಮಾಡಲು ಬಿಡದೆ ತಡೆಯೊಡ್ಡಿದರು.

ಜಾಗದ ಮಾಲೀಕ ಮತ್ತು ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಸುದ್ದಿ ತಿಳಿದು ರಾತ್ರಿ ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಮತ್ತು ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ತೆರಳಿ ಮಾತುಕತೆ ನಡೆಸಿ ತ್ಯಾಜ್ಯ ತುಂಬಿದ ಟೆಂಪೊವನ್ನು ವಾಪಸ್‌ ಕಳಿಸಿದ್ದಾರೆ. ಟೆಂಪೊದಲ್ಲಿ ತರುವಾಗ ರಸ್ತೆ ಉದ್ದಕ್ಕೂ ಚೆಲ್ಲಿದ ತ್ಯಾಜ್ಯವನ್ನು ಕೂಡ ಸ್ವಚ್ಛಚಗೊಳಿಸುವಂತೆ ಟೆಂಪೊ ಚಾಲಕನಿಗೆ ಪೊಲೀಸರು ಸೂಚನೆ ನೀಡಿದ್ದಾರೆ. ತ್ಯಾಜ್ಯದಿಂದ ಪರಿಸರವೆಲ್ಲಾ ದುರ್ನಾತ ಬೀರುತ್ತಿತ್ತು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT