ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ಮಹಾತ್ಮ ಗಾಂಧಿ ಮ್ಯೂಸಿಯಂ ಉದ್ಘಾಟನೆ

Published 25 ಡಿಸೆಂಬರ್ 2023, 6:38 IST
Last Updated 25 ಡಿಸೆಂಬರ್ 2023, 6:38 IST
ಅಕ್ಷರ ಗಾತ್ರ

ಮಂಗಳೂರು: ನಗರದಲ್ಲಿರುವ ಶತಮಾನಗಳಷ್ಟು ಹಳೆಯದಾದ ಮಹಾತ್ಮ ಗಾಂಧಿ ಮ್ಯೂಸಿಯಂ ನವೀಕರಣಗೊಂಡಿದ್ದು, ಅದನ್ನು ಕೊಡಿಯಾಲ್‌ಬೈಲ್‌ನ ಕೆನರಾ ಪ್ರೌಢಶಾಲೆಯಲ್ಲಿ  ಭಾನುವಾರ ಏರ್ಪಡಿಸಿದ್ದ ಕೆನರಾ ಸಮೂಹ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ‘ಜಾಗತಿಕ ಸಮ್ಮಿಲನ-2023’ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಲಾಯಿತು.

ಕೇಂದ್ರ ಪುರಾತತ್ವ ಮತ್ತು ಉತ್ಖನನ ಇಲಾಖೆಯ ಮಾಜಿ ನಿರ್ದೇಶಕ ರಾಮಚಂದ್ರ ಹೆಗಡೆ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ಪ್ರಾಧ್ಯಾಪಕ ಮುರುಗೇಶ್ ತುರುವೇಕೆರೆ, ಕೇರಳ ಸರ್ಕಾರದ ಪುರಾತತ್ವ ಇಲಾಖೆಯ ಡಾ.ವಿ.ಆರ್.ಶಾಜಿ, ಪ್ರಭಾಕರ ಕಿಣಿ, ರಾಮದಾಸ್ ಪ್ರಭು, ಮಹಾತ್ಮ ಗಾಂಧಿ, ಮ್ಯೂಸಿಯಂನ ಮರುವಿನ್ಯಾಸಕ್ಕೆ ನೆರವಾದ ಸುಜಯ್ ಲೋಬೊ, ಮ್ಯೂಸಿಯಂ ನಿರ್ದೇಶಕ ಪಯ್ಯನೂರು ರಮೇಶ್ ಪೈ ಭಾಗವಹಿಸಿದ್ದರು.

ಮ್ಯೂಸಿಯಂನಲ್ಲಿರುವ ಪುರಾತನ ವಸ್ತುಗಳನ್ನು ವೀಕ್ಷಿಸಲು ಹಳೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಯಿತು.


ಕೆನರಾ ಆಡಳಿತ ಮಂಡಳಿಯ ಅಧ್ಯಕ್ಷ  ವಾಸುದೇವ ಕಾಮತ್, ಕಾರ್ಯದರ್ಶಿ  ಎಂ.ರಂಗನಾಥ್ ಭಟ್, ಸದಸ್ಯರಾದ  ಸುರೇಶ್ ಕಾಮತ್, ಗೋಪಾಲಕೃಷ್ಣ ಶೆಣೈ  ಎಂ.ವಾಮನ್ ಕಾಮತ್, ಬಸ್ತಿ ಪುರುಷೋತ್ತಮ ಶೆಣೈ, ಶಿವಾನಂದ ಶೆಣೈ,  ಯೋಗೀಶ್ ಕಾಮತ್, ನರೇಶ್ ಶೆಣೈ, ಅಶ್ವಿನಿ ಕಾಮತ್, ಗೋಪಿನಾಥ್ ಭಟ್, ಯೋಗೀಶ್ ಕಾಮತ್, ಆಡಳಿತ ಅಧಿಕಾರಿ  ದೀಪ್ತಿ ನಾಯಕ್, ಸಾರ್ವಜನಿಕ ಸಂಪರ್ಕಾಧಿಕಾರಿ ಉಜ್ವಲ್ ಮಲ್ಯ, ಸಮ್ಮಿಲನದ ಉಸ್ತುವಾರಿ ಗೋಪಾಲಕೃಷ್ಣ ಶೆಟ್ಟಿ, ಕೆನರಾ ಶಿಕ್ಷಣ ಸಂಸ್ಥೆಗಳ ಬೋಧಕ ಹಾಗೂ ಇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT