ಮುಡಿಪು: ಮಂಜನಾಡಿ ಗ್ರಾಮದ ಖಂಡಿಕದ ಮನೆಯೊಂದರಲ್ಲಿ ಗ್ಯಾಸ್ ಸೋರಿಕೆಯಿಂದಾಗಿ ಉಂಟಾದ ಸ್ಫೋಟದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಫಾತಿಮತ್ ಮಾಯಿಝ (9) ಶನಿವಾರ ಮೃತಪಟ್ಟಿದ್ದಾಳೆ.

ಅವಘಡದಲ್ಲಿ ನಾಲ್ವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ ಮುತ್ತಲಿಬ್ ಅವರ ಪತ್ನಿ ಖುಬ್ರಾ ಅವರು ಡಿ.13ರಂದು ಮೃತಪಟ್ಟಿದ್ದರು. ಅವರ ಮೂವರು ಪುತ್ರಿಯರಲ್ಲಿ ಹಿರಿಯ ಪುತ್ರಿ ಝುಲೇಕ ಮೆಅದಿಯ ಗುರುವಾರ ಮೃತಪಟ್ಟಿದ್ದರು. ಮೆಅದಿಯ ಮೊಂಟೆಪದವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಪ್ರಕರಣದಲ್ಲಿ ಮಾಝಿಯಾ ಗುಣಮುಖಳಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾಳೆ.

ಡಿ.8ರಂದು ಸ್ಫೋಟ: ಡಿ.8ರಂದು ಮುತ್ತಲಿಬ್ ಅವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ನಲ್ಲಿ ಉಂಟಾದ ಸೋರಿಕೆಯಿಂದ ಸ್ಫೋಟ ಸಂಭವಿಸಿತ್ತು. ಸ್ಪೋಟದ ಪರಿಣಾಮ ಮನೆಯ ಚಾವಣಿ ಸಂಪೂರ್ಣವಾಗಿ ಹಾರಿ ಹೋಗಿತ್ತು. ಮನೆಯಲ್ಲಿ ಇಟ್ಟಿದ್ದ ಹೆಚ್ಚುವರಿ ಅಡುಗೆ ಅನಿಲದಲ್ಲಿ ಗ್ಯಾಸ್ ಸೋರಿಕೆ ಉಂಟಾದ ಕಾರಣ ಘಟನೆ ಸಂಭವಿಸಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಕೊಣಾಜೆ ಪೊಲೀಸ್ ಠಾಣೆಯಲ್ಲಿ ಗ್ಯಾಸ್ ಏಜೆನ್ಸಿ ವಿರುದ್ಧ ಪ್ರಕರಣ ದಾಖಲಾಗಿದೆ.

ಯು.ಟಿ.ಖಾದರ್ ಭೇಟಿ: ದುರಂತಕ್ಕೆ ಒಳಗಾದ ಮನೆಗೆ ಶನಿವಾರ ಭೇಟಿ ನೀಡಿದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಬಳಿಕ ಗಾಯಳುಗಳು ಚಿಕಿತ್ಸೆ ಪಡೆಯುತ್ತಿರುವ ನಿಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೂ ಭೇಟಿ ನೀಡಿ ಕುಟುಂಬದ ಸದಸ್ಯರ ಜೊತೆ ಚರ್ಚಿಸಿದರು.

‘ಪರಿಹಾರ ಯಾವಾಗ ಕೊಡಬೇಕು ಎಂಬುದು ಗೊತ್ತಿದೆ. ಮೂವರು ಜೀವನ್ಮರಣದ ಸ್ಥಿತಿಯಲ್ಲಿ ಇರುವಾಗ ಪರಿಹಾರ ಘೋಷಿಸುವುದು ಎಷ್ಟು ಸರಿ? ಅಂಥ ಸಂದರ್ಭದಲ್ಲಿ ದುಡ್ಡು ಮುಖ್ಯವಾಗಿರುವುದಿಲ್ಲ. ಮಾನವೀಯತೆಯನ್ನು ಮರೆಯಬಾರದು. ಎಲ್ಲವೂ ರಾಜಕೀಯವಲ್ಲ. ಊರಿನ ಹಿರಿಯರು, ಕುಟುಂಬದ ಯಜಮಾನ, ಕುಟುಂಬಿಕರ ಜೊತೆ ಮಾತುಕತೆ ಮಾಡುತ್ತೇನೆ. ಪ್ರಕರಣದ ಕುರಿತು ಮುಖ್ಯಮಂತ್ರಿ ಜತೆಗೂ ಚರ್ಚಿಸಲಾಗಿದೆ’ ಎಂದರು.

ಉಪ ವಿಭಾಗಾಧಿಕಾರಿ ಹರ್ಷವರ್ಧನ್, ಎಸಿಪಿ ಧನ್ಯಾ ಎಂ.ನಾಯಕ್, ಎಚ್.ಪಿ.ಗ್ಯಾಸ್ ಸಂಸ್ಥೆಯ ಮಾರುಕಟ್ಟೆ ವಿಭಾಗದ ಪ್ರಬಂಧಕ ರಾಹುಲ್, ತಹಶೀಲ್ದಾರ್ ಪುಟ್ಟರಾಜು, ಜಿ.ಪಂ ಮಾಜಿ ಸದಸ್ಯ ಎನ್.ಎಸ್.ಕರೀಂ , ಮೋನು ಕಲ್ಕಟ್ಟ, ಕೆ.ಪಿ.ಅಶ್ರಫ್, ಅಶ್ರಫ್ ಕಟ್ಟೆ, ರಫೀಕ್ ಕಲ್ಕಟ್ಟ ಜತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.