ಸೋಮವಾರ, ಮಾರ್ಚ್ 8, 2021
25 °C
ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ

ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ರೌಡಿಗೆ ಗುಂಡೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿ ಭವಿತ್ ರಾಜ್‌ನ ಮೇಲೆ ಇಲ್ಲಿನ ಪೊಲೀಸರು ಮಂಗಳವಾರ ಗುಂಡು ಹಾರಿಸಿದ್ದಾರೆ.

ಎಂಟು ಪ್ರಕರಣಗಳಲ್ಲಿ ಆತ ಭಾಗಿಯಾಗಿದ್ದ. ಜೊತೆಗೆ ಇತ್ತೀಚೆಗೆ ನಗರದ ಕುಲಶೇಖರದ ಸಿಲ್ವರ್ ಗೇಟ್ ಬಳಿ ಅಕ್ರಮ ಗೋ ಸಾಗಣೆ ಮಾಡಲಾಗುತ್ತಿದೆ ಎಂಬ ಶಂಕೆ ಮೇಲೆ ವಾಹನ ಅಡ್ಡಗಟ್ಟಿ ಮೂವರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿಯೂ ಭವಿತ್‌ ಭಾಗಿಯಾಗಿದ್ದ ಎಂಬ ಮಾಹಿತಿ ಪೊಲೀಸರಿಗೆ ತಿಳಿದು ಬಂದಿದೆ. 

ನಗರದ ಹೊರವಲಯದಲ್ಲಿ ಆತ ವಾಸ್ತವ್ಯ ಹೂಡಿರುವ ಬಗ್ಗೆ ಮಾಹಿತಿ ಆಧರಿಸಿ ಕಂಕನಾಡಿ ನಗರ ಠಾಣೆಯ ಇನ್ಸ್‌ಪೆಕ್ಟರ್ ಅಶೋಕ್ ಮತ್ತು ಸಿಬ್ಬಂದಿ ಬಂಧಿಸಲು ತೆರಳಿದ್ದರು. ‌ಆಗ ಆರೋಪಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಲು ಯತ್ನಿಸಿದ. ಇನ್ಸ್‌ಪೆಕ್ಟರ್ ಸ್ವಯಂ ರಕ್ಷಣೆಗಾಗಿ ಆತನ‌ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ' ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಆರೋಪಿ ಮತ್ತು ಆತನ ಸಹಚರರು ಭಾನುವಾರ ನಸುಕಿನ ಜಾವ ಸಿಲ್ವರ್ ಗೇಟ್ ಬಳಿ ಮಾವಿನ ಹಣ್ಣು ಸಾಗಣೆ ವಾಹನ ತಡೆದು ಮೂವರ ಮೇಲೆ ಹಲ್ಲೆ ನಡೆಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು