ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಾಂಧಿ ತತ್ವ ಅಳವಡಿಕೊಂಡಾಗ ಆಚರಣೆಗೆ ಮಹತ್ವ: ಜುಬಿನ್ ಮೊಹಪಾತ್ರ

Published : 2 ಅಕ್ಟೋಬರ್ 2024, 13:33 IST
Last Updated : 2 ಅಕ್ಟೋಬರ್ 2024, 13:33 IST
ಫಾಲೋ ಮಾಡಿ
Comments

ಪುತ್ತೂರು: ‘ಗಾಂಧಿ  ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕಾಗಿ, ದೇಶಕ್ಕಾಗಿ ಕೆಲಸ ಮಾಡಿದಾಗ ಗಾಂಧಿ ಜಯಂತಿ ಆಚರಣೆಗೆ ಮಹತ್ವ ಬರುತ್ತದೆ’ ಎಂದು ಉಪ ವಿಭಾಗಾಧಿಕಾರಿ ಜುಬಿನ್ ಮೊಹಪಾತ್ರ ಹೇಳಿದರು.

ನಗರದ ಬಸ್ ನಿಲ್ದಾಣದ ಬಳಿಯ ಗಾಂಧಿಕಟ್ಟೆಯಲ್ಲಿ ಬುಧವಾರ ನಡೆದ ಗಾಂಧಿ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.  ಪುತ್ತೂರು ನಗರ ಠಾಣೆಯ ಇನ್‌ಸ್ಪೆಕ್ಟರ್‌ ಜಾನ್ಸನ್ ಡಿಸೋಜ ಮಾತನಾಡಿದರು. ಪುರಸಭೆಯ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ, ಕಾಂಗ್ರೆಸ್ ರಾಜ್ಯ ವಕ್ತಾರ ಅಮಳ ರಾಮಚಂದ್ರ ಮಾತನಾಡಿದರು.

ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಎಂ.ಬಿ ವಿಶ್ವನಾಥ ರೈ, ಶ್ರೀಪ್ರಸಾದ್ ಪಾಣಾಜೆ, ಜೋಕಿಂ ಡಿಸೋಜ, ಪ್ರಸಾದ್ ಕೌಶಲ್ ಶೆಟ್ಟಿ, ರೂಪರೇಖಾ ಆಳ್ವ,  ರಾಮಣ್ಣ ಪಿಳಿಂಜ, ವೇದನಾಥ ಸುವರ್ಣ, ಸೀತಾರಾಮ ಶೆಟ್ಟಿ ಬನ್ನೂರು, ಮಹೇಶ್ಚಂದ್ರ ಸಾಲ್ಯಾನ್, ಸಯ್ಯದ್ ಕಮಲ್, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಶರೂನ್ ಸಿಕ್ಚೇರಾ, ವಿಶ್ವಜಿತ್ ಅಮ್ಮಂಜ, ರವಿಪ್ರಸಾದ್ ಶೆಟ್ಟಿ, ಲ್ಯಾನ್ಸಿ ಮಸ್ಕರೇನಸ್, ಮೌರೀಸ್ ಮಸ್ಕರೇನಸ್, ವಿಜಯಲಕ್ಷ್ಮಿ, ಅಸ್ಮಾ ಗಟ್ಟಮನೆ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT