ಅಕಾಲ ಹಲಸು ಸಂಗಮ: ಮಳಿಗೆ ಕಾಯ್ದಿರಿಸಲು ಸೂಚನೆ

7

ಅಕಾಲ ಹಲಸು ಸಂಗಮ: ಮಳಿಗೆ ಕಾಯ್ದಿರಿಸಲು ಸೂಚನೆ

Published:
Updated:

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡ್‌ ಸ್ಪರ್ಶ ಕಲಾ ಮಂದಿರದಲ್ಲಿ ಪುತ್ತೂರಿನ ನವಚೇತನ ಸ್ನೇಹ ಸಂಗಮ ಮತ್ತು ಅಕಾಲ ಹಲಸು ಸಂಗಮ ಸ್ವಾಗತ ಸಮಿತಿ ವತಿಯಿಂದ ಇದೇ 8ಮತ್ತು 9ರಂದು 'ಅಕಾಲ ಹಲಸು ಸಂಗಮ-2018' ಕಾರ್ಯಕ್ರಮ ನಡೆಯಲಿದ್ದು, ಅಂದು ವಿವಿಧ ಬಗೆಯ ಹಲಸು ಖಾದ್ಯ ಮಾರಾಟ ಮತ್ತು ಪ್ರದರ್ಶನಕ್ಕೆ ಮಳಿಗೆ ತೆರೆಯಲು ಅವಕಾಶ ನೀಡಲಾಗಿದೆ. 

ಹಲಸಿನ ಋತು ಮುಗಿದ ಬಳಿಕವೂ ವಿವಿಧ ಬಗೆಯ ಹಲಸಿನ ಖಾದ್ಯಗಳ ಪ್ರದರ್ಶನ, ವಿವಿಧ ತಳಿಯ ಗಿಡಗಳು, ಸಂಪನ್ಮೂಲ ವ್ಯಕ್ತಿಗಳು ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ನೀಡಲಿದ್ದಾರೆ. 60ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲು ವ್ಯವಸ್ಥೆಗೊಳಿಸಲಾಗಿದೆ. ಆಸಕ್ತರು ಇದೇ 6ರೊಳಗೆ ಕಾಯ್ದಿರಿಸಲು ಅನಂತಪ್ರಸಾದ್ ನೈತ್ತಡ್ಕ (9611543386) ಮತ್ತು ಪಾಂಡುರಂಗ ಭಟ್ ಕುದಿಂಗಿಲ (9741810502) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !