ಮಂಗಳೂರು: ಗುರುಪುರ ಮಠದಬೈಲುವಿನ ದೈವಸ್ಥಾನದ ದೈವದ ಕುತ್ತಿಗೆಗೆ ಹಾಕಲಾದ ಚಿನ್ನದ ಮೂರು ಕರಿಮಣಿ ಸರಗಳು ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಿಗ್ಗೆ ನಡುವೆ ಕಳವಾದ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

’ಮಂಗಳವಾರ ರಾತ್ರಿ ದೈವಸ್ಥಾನದಲ್ಲಿ ದೀಪ ಬೆಳಗಿ ಬಾಗಿಲು ಹಾಕಿದ್ದೆ. ಬುಧವಾರ ಬೆಳಿಗ್ಗೆ ದೀಪ ಇಡಲು ತೆರಳಿದಾಗ ದೈವಸ್ಥಾನದ ಬಾಗಿಲು ತೆರೆದಿತ್ತು. ದೈವದ ಕುತ್ತಿಗೆಯಲ್ಲಿದ್ದ 3 ಕರಿಮಣಿ ಸರಗಳು ಕಳವಾಗಿದ್ದವು. ಹರಕೆ ರೂಪದಲ್ಲಿ ಸಂದಾಯವಾಗಿದ್ದ ಈ ಕರಿಮಣಿ ಸರಗಳ ಮೌಲ್ಯ ₹ 75 ಸಾವಿರ ಎಂದು ಅಂದಾಜಿಸಲಾಗಿದೆ. ಅಲ್ಲದೇ ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು ₹ 2 ಸಾವಿರ ನಗದು ಕಳವಾಗಿದೆ ಎಂದು ಗಣೇಶ ಕೊಟ್ಟಾರಿ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಕಳ್ಳರು ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿರುವ ರಾಧಾ ಎಂಬವರ ಮನೆಯ ಬೀಗ ಮುರಿದು ಅಲ್ಮೇರಾಗಳನ್ನು ಮುರಿದು ಹಾಕಿರುತ್ತಾರೆ. ಸಮೀಪದ ಗುಲಾಬಿ ಎಂಬವರ ಮನೆಯ ಬಾಗಿಲುಗಳನ್ನು ಮತ್ತು ಅಲ್ಮೇರಾಗಳನ್ನು ಮುರಿದಿದ್ದಾರೆ. ಅವರ ಮನೆಯಲ್ಲಿ ದೇವರ ಆರಾಧನೆಗೆ ಬಳಸುವ ಸುಮಾರು ₹ 30 ಸಾವಿರ ಮೌಲ್ಯದ ಬೆಳ್ಳಿ ಸಾಮಗ್ರಿಗಳೂ ಕಳವಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.