ಬಂಟ್ವಾಳ: ಇಲ್ಲಿನ ಅಮ್ಮುಂಜೆ ಗ್ರಾಮದ ಬೆಂಜನಪದವು ಶಿವಾಜಿನಗರ ಎಂಬಲ್ಲಿ ಕಲಾವಿದ ಶಿವಪ್ರಶಾಂತ ಅವರು ಅಶ್ವತ್ಥ ಮರದ ಎಲೆಯಲ್ಲಿ ಸೃಜನಾತ್ಮಕ ಕಲಾಕೃತಿಗಳನ್ನು ರಚಿಸುವ ಮೂಲಕ ಗಮನ ಸೆಳೆದಿದ್ದಾರೆ.
ಈ ಅಪರೂಪದ ಕಲೆಗೆ ವಿಶೇಷ ತಾಳ್ಮೆ ಮತ್ತು ಸೃಜನಶೀಲತೆ ಅಗತ್ಯವಿದ್ದು, ಈಗಾಗಲೇ ತನ್ನ ಕೈಚಳಕದಲ್ಲಿ ಶ್ರೀ ಕೃಷ್ಣ, ಅಯ್ಯಪ್ಪ ಸ್ವಾಮಿ, ಕಟೀಲು ಶ್ರೀ ದುರ್ಗಾಪರಮೇಶ್ವರಿ, ಪೊಳಲಿ ಶ್ರೀ ರಾಜರಾಜೇಶ್ವರಿ, ಗಣಪತಿ, ಶಿವ, ದೇವಿ, ನಿತ್ಯಾನಂದ ಸ್ವಾಮಿ, ಕಾಂತಾರ ಸಿನೆಮಾದ ವರಾಹರೂಪ ಪಂಜುರ್ಲಿ ದೈವ, ಅಂಬೇಡ್ಕರ್, ನರೇಂದ್ರ ಮೋದಿ, ಚಾರ್ಲಿ ಚಾಪ್ಲಿನ್, ಹುಲಿ ಚಿತ್ರ ಮೂಡಿ ಬಂದಿದೆ.
ತೆಂಗಿನ ಹಸಿ ಗರಿಯಲ್ಲಿ ಕೂಡ ಚಿತ್ರಗಳು ರೂಪ ಪಡೆದುಕೊಂಡಿವೆ. ಬ್ಯಾಂಕ್ ಉದ್ಯೋಗಿಯಾಗಿರುವ ಅವರು ಯೂಟ್ಯೂಬ್‌ನಲ್ಲಿ ಇಂತಹ ಕಲೆ ಬಗ್ಗೆ ತಿಳಿದುಕೊಂಡು ವಿದ್ಯೆ ಕರಗತ ಮಾಡಿಕೊಂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.