ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುರತ್ಕಲ್: ಕರಾಟೆ ಚಾಂಪಿಯನ್‌ಷಿಪ್‌

Published 31 ಆಗಸ್ಟ್ 2024, 14:01 IST
Last Updated 31 ಆಗಸ್ಟ್ 2024, 14:01 IST
ಅಕ್ಷರ ಗಾತ್ರ

ಸುರತ್ಕಲ್: ಡೋಜೋ ಆಯೋಜಿಸಿದ್ದ 35ನೇ ರಾಜ್ಯಮಟ್ಟದ ಇಂಟರ್ ಡೋಜೋ ಕರಾಟೆ ಚಾಂಪಿಯನ್‌ಷಿಪ್‌ 2024 ಸುರತ್ಕಲ್‌ನ ಸೇಕ್ರೆಡ್ ಹಾರ್ಟ್ ಶಾಲೆಯಲ್ಲಿ ನಡೆಯಿತು.

ಸ್ಪರ್ಧೆ ಉದ್ಘಾಟಿಸಿದ ದುರ್ಗಾಂಬಾ ದೇವಸ್ಥಾನ ತಡಂಬೈಲಿನ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಭಟ್, ಸ್ಪರ್ಧಾಳುಗಳಿಗೆ ಶುಭಕೋರಿದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಮಾತನಾಡಿ, ಈ ಕ್ರೀಡೆಯಲ್ಲಿ ತೊಡಗಿಸಿಕೊಂಡ ಮಕ್ಕಳು ಡ್ರಗ್ಸ್ ಮುಂತಾದ ದುಶ್ಚಟಗಳಿಂದ ದೂರವಿರುತ್ತಾರೆ ಎಂದರು.

ಮುಖ್ಯ ಅತಿಥಿಯಾಗಿದ್ದ ಫಾ. ಪೆರೇಸ್ ಕರಾಟೆಯು ಆತ್ಮ ರಕ್ಷಣೆಯ ಕಲೆಯೊಂದಿಗೆ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದರು.

ಐಕೆಎಎ ಮುಖ್ಯ ಶಿಕ್ಷಕ ಹಾಗೂ ಬಿಕೆಐ ಪ್ರಧಾನ ಕಾರ್ಯದರ್ಶಿ ಕ್ಯೋಷಿ ಪ್ರವೀಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.


ಈ ಕಾರ್ಯಕ್ರಮದ ಆಯೋಜಕ ಶ್ರೀನಿವಾಸ್ ರಾವ್ ವಂದಿಸಿದರು. ಚೇತನಾ ದತ್ತಾತ್ರೇಯ ಹಾಗೂ ಗೋಪಾಲಕೃಷ್ಣ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.

ಹಿರಿಯ ಶಿಕ್ಷಕರಾದ ಆನಂದ ದೇವಾಡಿಗ, ಪ್ರಭಾಕರ್ ಕುಂದರ್, ವಿನೋದ್ ಉಳ್ಳಾಲ್, ಎಂ ಸುರೇಶ್, ದಿನೇಶ್ ಆಚಾರ್, ರಘುಪತಿ ಬ್ರಹ್ಮಾವರ್, ಗುರುಪ್ರಸಾದ್ ಕಾರಂತ್, ಲತೀಶ್ ಕುಮಾರ್, ಪ್ರಶಾಂತ್ ಕುಮಾರ್, ಅಬ್ದುಲ್ ಖಾದರ್ ಹುಸೇನ್, ಶಿವಪ್ರಸಾದ್ ಆಚಾರ್ಯ, ರಾಜಶೇಖರ್ ಸುವರ್ಣ ಹಾಗೂ ಸುಧೀರ್ ಪ್ರಭು ಉಪಸ್ಥಿತರಿದ್ದರು.

ನೂರಕ್ಕಿಂತ ಹೆಚ್ಚು ಘಟಕಗಳಿಂದ ಸುಮಾರು 1,500 ಸ್ಪರ್ಧಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT