ಬಂಟ್ವಾಳ: ತಾಲ್ಲೂಕಿನ 51 ಗ್ರಾಮ ಪಂಚಾಯಿತಿಗಳ ಪೈಕಿ ಪೊಳಲಿ ಸಮೀಪದ ಕರಿಯಂಗಳ ಗ್ರಾಮ ಪಂಚಾಯಿತಿ ಸ್ಥಳೀಯ ನಾಗರಿಕರಿಗೆ ಒಂದೇ ಸೂರಿನಡಿ ವಿವಿಧ ಸವಲತ್ತು ನೀಡುತ್ತಿದೆ.

5 ಎಕರೆ ಜಮೀನಿನಲ್ಲಿ ಕಾಳಿ ಸರೋವರ ಹೆಸರಿನಲ್ಲಿ ಬೃಹತ್ ಕೆರೆ ನಿರ್ಮಿಸಿ ಸುತ್ತಲೂ ಆಕರ್ಷಕ ಬೇಲಿ ಅಳವಡಿಸಿ ಸ್ಥಳೀಯ ಕೃಷಿಕರ ಮನ ಗೆದ್ದಿದೆ. ಈ ಪರಿಸರದಲ್ಲಿ ಮಳೆ ನೀರು ಪೋಲಾಗುವುದನ್ನು ತಡೆಯುವುದರ ಜೊತೆಗೆ ಬೇಸಿಗೆಯಲ್ಲಿ ಬಾವಿಯಲ್ಲಿ ನೀರಿನ ಒರತೆ ಹೆಚ್ಚಿದ್ದು, ಕುಡಿಯುವ ನೀರಿನ ಸಮಸ್ಯೆಯೂ ಪರಿಹಾರಗೊಂಡಿದೆ.

20 ಸೆಂಟ್ಸ್ ಜಮೀನಿನಲ್ಲಿ ಪಂಚಾಯಿತಿ ಕಟ್ಟಡ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕ್, ಮೆಸ್ಕಾಂ ಕಚೇರಿ, ಸಾರ್ವಜನಿಕ ಗ್ರಂಥಾಲಯ, ಅಂಗವಿಕಲರಿಗೆ ಪ್ರತ್ಯೇಕ ಗ್ರಂಥಾಲಯ, ಸಂಜೀವಿನಿ ಒಕ್ಕೂಟದ ಸದಸ್ಯೆಯರಿಗೆ ಉತ್ಪನ್ನಗಳ ಮಾರಾಟಕ್ಕೆ ‘ಸಂಜೀವಿನಿ ಸೌಧ’, ಗ್ರಾಮ ಆಡಳಿತಾಧಿಕಾರಿಗಳ ಕಚೇರಿ ಒಂದೇ ಕಟ್ಟಡದಲ್ಲಿವೆ. ಈ ನಡುವೆ ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಅನುಕೂಲವಾಗುವಂತೆ ‘ಗ್ರಾಮ ವನ್’ ಇದೆ. ಇದರಿಂದಾಗಿ ಗ್ರಾಮಸ್ಥರಿಗೆ ಒಂದೇ ಸೂರಿನಡಿ ಸೌಲಭ್ಯ ಒದಗಿಸುವ ಕನಸು 4 ತಿಂಗಳ ಹಿಂದೆ ನನಸಾಗಿದೆ. ಸುಮಾರು ₹ 17.50 ಲಕ್ಷ ವೆಚ್ಚದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಸುಸಜ್ಜಿತ ಕಟ್ಟಡ ನಿರ್ಮಿಸಲು ಸಾಧ್ಯವಾಗಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ ತಿಳಿಸಿದ್ದಾರೆ.

ನಾವು ಸ್ವಚ್ಛತೆಗೆ ಆದ್ಯತೆ ನೀಡುತ್ತಿರುವ ಪರಿಣಾಮ ಇಲ್ಲಿನ ಪೊಳಲಿ ವಾರ್ಷಿಕ ಜಾತ್ರೆ ಸಂದರ್ಭದಲ್ಲಿ ಸಂತೆಯಲ್ಲಿ ಅಂಗಡಿ ಮುಂಭಾಗ ದೂಳು ಹಾರಾಡದಂತೆ ಕಡ್ಡಾಯ ಮ್ಯಾಟ್ ಅಳವಡಿಕೆ, ಕಲ್ಲಂಗಡಿ ಸಿಪ್ಪೆ, ಪೇಪರ್ ಲೋಟ, ಟಿಶ್ಯೂ ಪೇಪರ್ ಮತ್ತಿತರ ಕಸ ಎಲ್ಲೆಂದರಲ್ಲಿ ಎಸೆಯದೆ ರಥಬೀದಿ ಮತ್ತು ಚೆಂಡಿನ ಗದ್ದೆ ಬದಿ ಅಳವಡಿಸಲಾಗಿರುವ ಕಸದ ತೊಟ್ಟಿಯಲ್ಲೇ ಭಕ್ತರು ಕಸ ತಂದು ಹಾಕುವಷ್ಟರ ಮಟ್ಟಿಗೆ ಜಾಗೃತಿ ಮೂಡಿಸಿದ್ದೇವೆ ಎಂದು ಅವರು ಹೇಳಿದರು.

1994ರಿಂದ ಈಗಾಗಲೇ ಒಟ್ಟು 10 ಮಂದಿ ಅಧ್ಯಕ್ಷರನ್ನು ಕಂಡಿರುವ ಗ್ರಾಮ ಪಂಚಾಯಿತಿ 2021ರಿಂದ 2023ರ ತನಕ ಅಧ್ಯಕ್ಷರಾಗಿದ್ದ ಚಂದ್ರಹಾಸ ಪಲ್ಲಿಪಾಡಿ ಅವರ ದೂರದೃಷ್ಟಿತ್ವ ಮತ್ತು ಸಮಾನತೆಯಿಂದ ಕಂಡುಕೊಂಡ ರೀತಿ ನಮಗೆಲ್ಲಾ ಅನುಕರಣೀಯವಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ ಲೋಕೇಶ್ ಪ್ರತಿಕ್ರಿಯಿಸಿದ್ದಾರೆ.

12 ಮಂದಿ ಸದಸ್ಯರನ್ನು ಹೊಂದಿರುವ ಇಲ್ಲಿ 9 ಮಂದಿ ಕಾಂಗ್ರೆಸ್ ಬೆಂಬಲಿತ, ಎರಡು ಬಿಜೆಪಿ ಬೆಂಬಲಿತ ಹಾಗೂ ಒಬ್ಬರು ಅವಿರೋಧವಾಗಿ ಆಯ್ಕೆಗೊಂಡ ಮಹಿಳಾ ಸದಸ್ಯೆ ಇದ್ದಾರೆ.

ಈಗಾಗಲೇ ಸಾಣೂರುಪದವು ಎಂಬಲ್ಲಿ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪಿಸಲು ಜಮೀನು ಮೀಸಲಿಟ್ಟು ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆ ಮಂಜೂರಾತಿ ಹಂತದಲ್ಲಿದೆ. ಉಳಿದಂತೆ ಪೊಳಲಿ ಸರ್ಕಾರಿ ಪ್ರೌಢಶಾಲೆಗೆ ಮೂಲ ಸೌಕರ್ಯ, ಪಲ್ಲಿಪಾಡಿ ಅಂಗನವಾಡಿ ಕೇಂದ್ರಕ್ಕೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳಿಂದಲೂ ಶಹಭಾಸ್ ಗಿರಿ ದೊರೆತಿದ್ದರೂ ಜಿಲ್ಲೆ ಮತ್ತು ರಾಜ್ಯಮಟ್ಟದ ಪ್ರಶಸ್ತಿ ಬಂದಿಲ್ಲ ಎನ್ನುತ್ತಾರೆ ಸ್ಥಳೀಯ ನಾಗರಿಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.