ಕಾಸರಗೋಡು: ಮಾವುಂಗಾಲ್ನಲ್ಲಿ ನಕಲಿ ಬಂದೂಕು ತೋರಿಸಿ, ವ್ಯಕ್ತಿಯಿಂದ ₹10.20 ಲಕ್ಷ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು ನಾಲ್ವರು ಉತ್ತರ ಭಾರತ ನಿವಾಸಿಗಳನ್ನು ಮಂಗಳೂರಿನಲ್ಲಿ ಬಂಧಿಸಿ, ಹೊಸದುರ್ಗ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಬಿಹಾರ ನಿವಾಸಿಗಳಾದ ಇಬ್ರಾನ್ ಆಲಂ, ಮುಹಮ್ಮದ್ ಮಾಲೀಕ್, ಮುಹಮ್ಮದ್ ಫಾರೂಖ್, ಅಸ್ಸಾಂ ನಿವಾಸಿ ಧನಂಜಯ ಬೋರ ಬಂಧಿತರು. ಬುಧವಾರ ರಾತ್ರಿ ಘಟನೆ ನಡೆದಿತ್ತು. ಹೊಸದುರ್ಗದ ಕ್ರಷರ್ ಸಂಸ್ಥೆಯೊಂದರ ವ್ಯವಸ್ಥಾಪಕ ಕೋಯಿಕ್ಕೋಡ್ ನಿವಾಸಿ ರವೀಂದ್ರನ್ ಅವರನ್ನು ಬೆದರಿಸಿದ ಆರೋಪಿಗಳು ಹಣ ಸುಲಿಗೆ ಮಾಡಿದ್ದರು. ಆರೋಪಿಗಳು ಕಾಞಂಗಾಡು ರೈಲು ನಿಲ್ದಾಣದ ಮೂಲಕ ರೈಲಿನಲ್ಲಿ ಮಂಗಳೂರಿಗೆ ಹೊರಟಿದ್ದರು. ಮಂಗಳೂರಿನಲ್ಲಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.