ಉಜಿರೆ: ರಾಜ್ಯದಲ್ಲಿ ಕನ್ನಡ ಭಾಷೆಗೆ ಪ್ರಭುತ್ವ ದೊರಕಬೇಕು, ಕನ್ನಡದ ಮೇಲೆ ಇತರ ಭಾಷೆಗಳ ಸವಾರಿ ನಿಲ್ಲಬೇಕು, ಕನ್ನಡ ಮಾಧ್ಯಮ ಶಾಲೆಗಳನ್ನು ಬಲಪಡಿಸಿ ನಾಡು–ನುಡಿ ಮತ್ತು ಸಂಸ್ಕೃತಿಗೆ ಕಾಯಕಲ್ಪ ನೀಡಬೇಕು ಎಂದು ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ ಅವರು ಆಗ್ರಹಿಸಿದರು.

ಭಾನುವಾರ ಉಜಿರೆಯಲ್ಲಿ ಮುಕ್ತಾಯಗೊಂಡ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಎಲ್ಲ ಚಟುವಟಿಕೆ ಕನ್ನಡದಲ್ಲೇ ನಡೆಯಬೇಕು, ಸಾಹಿತ್ಯದ ಸೊಗಡನ್ನು ಸವಿಯಲು ದೇಶಿ ಪರಂಪರೆ ಅನುಸರಿಬೇಕು ಎಂದು ಸಲಹೆ ನೀಡಿದ ಅವರು ಮೂರು ದಿನ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ-ಸಾಮರಸ್ಯ ಮತ್ತು ಸಮೃದ್ಧಿ ಎಂಬ ಆಶಯ ಈಡೇರಿದೆ ಎಂದರು.

ಸಾಹಿತ್ಯಕ್ಕೆ ಸಹೃದಯರೇ ಜೀವಾಳ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಸಾಹಿತ್ಯಕ್ಕೆ ಓದುಗರೇ ಜೀವಾಳವಾಗಿದ್ದು ಸಾಹಿತ್ಯ ರಚನೆಯಿಂದಲೇ ಬದುಕು ಕಟ್ಟಿಕೊಂಡ ಅನೇಕ ಸಾಹಿತಿಗಳು ಇದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆಯಬೇಕು ಎಂದು ಹೇಳಿದರು.

ಮುಂಬೈ ವಿ.ವಿ. ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾ ಪಕ ತಾಳ್ತಜೆ ವಸಂತ ಕುಮಾರ್ ಸಮಾರೋಪ ಭಾಷಣ ಮಾಡಿದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್.ಸನ್ಮಾನಿಸಿದರು. ಧರ್ಮಸ್ಥಳ ಡಿ. ಹರ್ಷೇಂದ್ರ ಕುಮಾರ್ ಮತ್ತು ಉಜಿರೆಯ ಶರತ್ ಕೃಷ್ಣ ಪಡ್ವೆಟ್ನಾಯ ಇದ್ದರು. ಯದುಪತಿ ಗೌಡ ಸ್ವಾಗತಿಸಿದರು. ಬೆಳಾಲ್ ರಾಮಕೃಷ್ಣ ಭಟ್ ವಂದಿಸಿದರು. ಶಿಕ್ಷಕರದ ದೇವುದಾಸ ನಾಯಕ್ ಮತ್ತು ಅಜಿತ್ ಕೊಕ್ರಾಡಿ ನಿರ್ವಹಿಸಿದರು.

ಸನ್ಮಾನಿತರು: ಡಾ. ಚಿದಾನಂದ ಕೆ.ವಿ. ಸುಳ್ಯ (ವೈದ್ಯಕೀಯ) ಎಡ್ವರ್ಡ್ ಡಿಸೋಜ (ನಿವೃತ್ತ ಯೋಧರು), ಡಾ.ಶ್ರೀಪತಿ ರಾವ್ ಪುತ್ತೂರು (ವೈದ್ಯಕೀಯ), ಆರ್.ನಾಭಿರಾಜ ಪೂವಣಿ (ಪತ್ರಕರ್ತ) ಅಬೂಬಕ್ಕರ್ ಕೈರಂಗಳ (ಸಾಹಿತ್ಯ), ಮಧೂರು ಮೋಹನ ಕಲ್ಲೂರಾಯ (ಗಮಕ), ಕಮಲಾ ಭಟ್ (ಭರತನಾಟ್ಯ), ತನಿಯಪ್ಪ ನಲ್ಕೆ (ದೈವಾರಾಧನೆ) ಚೈತನ್ಯ ಕಲ್ಯಾಣತ್ತಾಯ (ಜ್ಯೋತಿಷ್ಯ) ಜೀವನ್‌ರಾಮ್ ಸುಳ್ಯ, ಅದ್ವೈತ್ ಕನ್ಯಾನ
(ಚೆಂಡೆ ವಾದನ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.