ಕಾಸರಗೋಡು: ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆ ಮಾರ್ಚ್ 27ರಿಂದ ಏ.7ರವರೆಗೆ ನಡೆಯಲಿದೆ. 13 ವರ್ಷಗಳಿಂದ ನವೀಕರಣ ಕಾರ್ಯ ನಡೆಯುತ್ತಿದ್ದು, ಸಿದ್ಧತೆ ಪೂರ್ಣಗೊಂಡಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಕೆ.ಗಿರೀಶ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಲಬಾರ್ ದೇವಸ್ವಂ ಮಂಡಳಿ ಮೂಲಕ ರಚಿಸಲಾದ ನವೀಕರಣ ಸಮಿತಿ ನೇತೃತ್ವದಲ್ಲಿ ₹ 10 ಕೋಟಿ ವೆಚ್ಚದಲ್ಲಿ ಬ್ರಹ್ಮಕಲಶೋತ್ಸವ ಸಂಬಂಧಿ ಚಟುವಟಿಕೆ ನಡೆಯಲಿವೆ. ನವೀಕರಣದ ಕಾರ್ಯಗಳಿಗೆ ₹ 24 ಕೋಟಿ ವೆಚ್ಚಮಾಡಲಾಗಿದೆ. ಪ್ರಧಾನ ದೇಗುಲದ ನವೀಕರಣ, ಉಪದೇವತೆಗಳ ಗುಡಿಗಳ ನವೀಕರಣ, ಶಿಲಾಮಯ ಗುಡಿಗಳ ನಿರ್ಮಾಣ, ಸುತ್ತು ಪೌಳಿಗಳ ದುರಸ್ತಿ ಕಾರ್ಯ ನಡೆದಿದೆ ಎಂದರು.

ಸಮಾರಂಭಕ್ಕೆ ಸುಮಾರು ಒಂದೂವರೆ ಲಕ್ಷ ಭಕ್ತರು ಬರಲಿದ್ದು, ಮಧೂರು, ಕೊಲ್ಯ, ಚೇನಕ್ಕೋಡು ಬಯಲುಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ನಗರದಿಂದ ಬಸ್ ಸೌಲಭ್ಯ ಪರಕ್ಕಿಲವರೆಗೆ ಮಾತ್ರ ಇರಲಿದ್ದುಮ ಅಶಕ್ತರಿಗೆ ವಿಶೇಷ ವಾಹನ ಸೌಲಭ್ಯ ಇದೆ ಎಂದರು.

ದೇವಾಲಯದ ಈಶಾನ್ಯ ಭಾಗದ ಕೊಲ್ಯ ಬಯಲಿನಲ್ಲಿ ಎರಡು ವೇದಿಕೆ, ಪಾಕಶಾಲೆ, ಉಗ್ರಾಣ, ಪ್ರಸಾದ ಭೋಜನ ವಿತರಣೆ ನಡೆಯಲಿದೆ. ದೇವಾಲಯದ ತೆಂಕು ಭಾಗದ ಪದಾರ್ಥಿ ಬಯಲಿನಲ್ಲಿ ಒಂದು ವೇದಿಕೆ, ಊಟದ ಚಪ್ಪರ, ಪಾಕ ವ್ಯವಸ್ಥೆಯ ವಿಭಾಗ ಇರಲಿದೆ. ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಪ್ರಸಾದ ಭೋಜನ ವಿತರಣೆ, ಕುಡಿಯುವ ನೀರಿನ ವ್ಯವಸ್ಥೆಗಾಗಿ ಹೆಚ್ಚುವರಿ 5 ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ದೇವಾಲಯದ ಪೂರ್ವಭಾಗದದಲ್ಲಿ ಭಜನಾ ವೇದಿಕೆ ಇರಲಿದೆ ಎಂದರು.

ದೇರೆಬೈಲು ಶಿವಪ್ರಸಾದ ತಂತ್ರಿ ಅವರು ಬ್ರಹ್ಮಕಲಶೋತ್ಸವದ ಮತ್ತು ತಂತ್ರಿ ಉಳಿಯತ್ತಾಯ ವಿಷ್ಣು ಆಸ್ರ ಮೂಡಪ್ಪ ಸೇವೆಯ ತಾಂತ್ರಿಕ ವಿಭಾಗದ ನೇತೃತ್ವ ವಹಿಸುವರು. ಶಿಲ್ಪಿ ಎಸ್.ಎಂ.ಪ್ರಸಾದ್, ಸಹಾಯಕ ಜಗನ್ನಿವಾಸ ರಾವ್ ಶಿಲ್ಪ ಶಾಸ್ತ್ರದ ಸೇವೆ ಒದಗಿಸುವರು. ಪ್ರತಿದಿನ ಎರಡು ಧಾರ್ಮಿಕ ಸಭೆಗಳು ನಡೆಯಲಿದ್ದು, ಯತಿಗಳು, ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಖಂಡರು ಭಾಗವಹಿಸುವರು. ಬೆಳಿಗ್ಗೆಯಿಂದ ರಾತ್ರಿಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಳು ನಡೆಯಲಿವೆ. ವಿವಿಧೆಡೆಯಿಂದ ಬಂದ 5 ಸಾವಿರಕ್ಕೂ ಅಧಿಕ ಮಂದಿ ಶ್ರಮದಾನ ನಡೆಸಿದ್ದಾರೆ. ಆಹಾರ ವಿತರಣೆ, ಸ್ವಚ್ಛತೆ, ಬಂದೋಬಸ್ತ್ ಚಟುವಟಿಕೆಯಲ್ಲಿ ಸಾವಿರಾರು ಮಂದಿ ಸ್ವಯಂಸೇವಕರು ಸೇವೆ ಸಲ್ಲಿಸುವರು ಎಂದರು.

ಪದಾಧಿಕಾರಿಗಳಾದ ನಾರಾಯಣಯ್ಯ ಮಧೂರು, ರಾಜೀವನ್ ನಂಬ್ಯಾರ್, ರಂಜಿತ್ ಮನ್ನಿಪ್ಪಾಡಿ, ಕಾರ್ತಿಕ್ ಮಧೂರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.