ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸವಾಲು ಎದುರಿಸಿ ಮುನ್ನಡೆದರೆ ಯಶಸ್ಸು: ಪ್ರೊ‌.ಪಿ.ಎಲ್.ಧರ್ಮ

Published 6 ಜೂನ್ 2024, 13:59 IST
Last Updated 6 ಜೂನ್ 2024, 13:59 IST
ಅಕ್ಷರ ಗಾತ್ರ

ಮುಡಿಪು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅನೇಕ ಸವಾಲುಗಳಿದ್ದು, ಓದು, ಕಠಿಣ ಪರಿಶ್ರಮದೊಂದಿಗೆ ಸವಾಲು ಎದುರಿಸಿ ಮುನ್ನಡೆದರೆ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಮಂಗಳೂರು‌ ವಿವಿಯಲ್ಲಿ ಎರಡು ದಿನ ನಡೆಯಲಿರುವ ಅಂತರರಾಷ್ಟ್ರೀಯ ಸಮ್ಮೇಳನ ‘ಮ್ಯಾಗ್ನಂ’ ಹಾಗೂ ರಾಷ್ಟ್ರೀಯ ಮಟ್ಟದ ಕಾಮರ್ಸ್, ಮ್ಯಾನೇಜ್‌ಮೆಂಟ್ ಮತ್ತು ಕಲ್ಚರಲ್ ಫೆಸ್ಟ್‌ಗೆ ಗುರುವಾರ ಚಾಲನೆ‌ ನೀಡಿ ಅವರು ಮಾತನಾಡಿದರು.

ಕೈಗಾರಿಕೋದ್ಯಮ, ಬ್ಯಾಂಕಿಂಗ್ ಕ್ಷೇತ್ರಗಳು ದೇಶದ ಅಭಿವೃದ್ಧಿಯಲ್ಲೂ ಪ್ರಮುಖ ಪಾತ್ರವಹಿಸುತ್ತದೆ. ಈ ಸಂಬಂಧ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ತೊಡಗಿಸಿಕೊಂಡು ಮುನ್ನಡೆದರೆ ಹೆಚ್ಚಿನ ಜ್ಞಾನ‌ ಸಂಪಾದನೆಯೊಂದಿಗೆ ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯವಾಗುತ್ತದೆ  ಎಂದರು.

ಮಲೇಷ್ಯಾದ ಏಷಿಯನ್ ಗ್ರೂಫ್ ಆಫ್ ಇನ್‌ಸ್ಟಿಟ್ಯೂಷನ್‌ನ ಪ್ರಾಧ್ಯಾಪಕ, ಮ್ಯಾನೇಜ್‌ಮೆಂಟ್‌ ಕೋಚ್ ಶರಣ್ ಕುಮಾರ್ ಶೆಟ್ಟಿ ಮಾತನಾಡಿ, ಕೈಗಾರಿಕೋದ್ಯಮ, ಬ್ಯಾಂಕಿಂಗ್, ವಾಣಿಜ್ಯೋದ್ಯಮ ಕ್ಷೇತ್ರಗಳ ಬಗ್ಗೆ ಅಧ್ಯಯನ, ಸಂಶೋಧನೆ ನಡೆಯಬೇಕು ಎಂದರು.

ಕುಲಸಚಿವ ರಾಜು ಮೊಗವೀರ, ಮಂಗಳೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಎಂ.ಪಿ.ಸುಬ್ರಹ್ಮಣ್ಯ ಅವರು ಮಾತನಾಡಿದರು.

ವಿಭಾಗದ ಅಧ್ಯಕ್ಷರಾದ ಪ್ರೀತಿ ಕೀರ್ತಿ ಡಿಸೋಜ ಅಧ್ಯಕ್ಷತೆ ವಹಿಸಿದ್ದರು.

ಕಾನ್ಫೆಡರೇಷನ್‌ ಆಫ್ ಇಂಡಿಯನ್ ಇಂಡಸ್ಟ್ರೀಸ್‌ನ ಅಧ್ಯಕ್ಷರಾದ ಅಜಿತ್ ಕಾಮತ್, ಬ್ಯಾಂಕ್ ಆಫ್ ಬರೋಡಾದ ವಲಯ ಜನರಲ್ ಮ್ಯಾನೇಜರ್ ರಾಜೇಶ್ ಖನ್ನ, ಯೂನಿಯನ್ ಬ್ಯಾಂಕ್‌ನ ವಲಯ ಜನರಲ್ ಮ್ಯಾನೇಜರ್ ರೇಣುಕಾ‌ನಾಯರ್, ಪ್ರಾಧ್ಯಾಪಕರಾದ ಈಶ್ವರ ಪಿ,‌ ಮುನಿರಾಜು, ವೇದವ ಪಿ., ಪರಮೇಶ್ಚರ, ಉಪನ್ಯಾಸಕರಾದ ದಿನಕರ, ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸಂಘದ ಶಿವಪ್ರಸಾದ್, ಮನ್ವಿತ್ ಶೆಟ್ಟಿ, ಭೂಮಿಕಾ ಕೆ.ಆರ್., ಮಹಂತೇಶ್, ರೇಖಾ ಕೆ.ಪಿ, ಶರಣ್ಯ, ವೆಂಕಟೇಶ್, ಪವಿತ್ರಾ,‌ ಪಿ.ಖೈರುನ್ನಿಸಾ ಭಾಗವಹಿಸಿದ್ದರು.

ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ರಶ್ಮಿತಾ ಕೋಟ್ಯಾನ್ ಸ್ವಾಗತಿಸಿದರು. ವಿದ್ಯಾರ್ಥಿನಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT