ಮಂಗಳೂರು: ಸಂಬಂಧಿಕರ ಜೊತೆ ಈಜಲು ತೆರಳಿ ಗುಡ್ಡಕೊಪ್ಪ ಭಾಗದ ಸಮುದ್ರದಲ್ಲಿ ನಾಪತ್ತೆಯಾಗಿರುವ ವ್ಯಕ್ತಿಯ ಪತ್ತೆಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಸುರತ್ಕಲ್ ಪೊಲೀಸರು ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಹಿರೇಮುರಾಳ ಗ್ರಾಮದ ಬಸವರಾಜು (22) ಬಾವ ರಾಜು, ಪತ್ನಿಯ ಅಕ್ಕನ ಮಕ್ಕಳಾದ ರವಿ ಮತ್ತು ಸಿದ್ದು ಜೊತೆಗೂಡಿ ಈಜಲು ಹೋಗಿದ್ದರು. ಎಲ್ಲರೂ ಬೃಹತ್ ಅಲೆಯಲ್ಲಿ ಸಿಲುಕಿದ್ದರು. ಮೂವರು ಅದರಿಂದ ತಪ್ಪಿಸಿಕೊಂಡು ಬಂದಿದ್ದು ಬಸವರಾಜು ಕಾಣೆಯಾಗಿದ್ದಾರೆ.

ಸ್ಥಳೀಯ ಈಜುಪಟುಗಳು, ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ ಮತ್ತು ನಾಪತ್ತೆಯಾದವರ ಸಂಬಂಧಿಕರು ಹುಡುಕಾಡುತ್ತಿದ್ದಾರೆ. ಶುಕ್ರವಾರ ಸಂಜೆಯ ವರೆಗೂ ಬಸವರಾಜು ಪತ್ತೆಯಾಗಲಿಲ್ಲ. ಬಸವರಾಜು ಒಂದು ತಿಂಗಳ ಹಿಂದೆ ಮಂಗಳೂರಿಗೆ ಬಂದು ಕುಳಾಯಿ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ಸುರತ್ಕಲ್ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.