ಮಂಗಳೂರು: ನಗರದ ಬೈಕಂಪಾಡಿಯ ಮಲಬಾರ್, ಲಕ್ಷ್ಮಿ ಹಾಗೂ ಕಾರ್ನಾಡ್ ಆಮ್ಲಜನಕ ರೀಫಿಲ್ಲಿಂಗ್ ಘಟಕಗಳಿಗೆ ಭೇಟಿ ನೀಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಆಮ್ಲಜನಕ ಉತ್ಪಾದನೆ ಹಾಗೂ ಸಿಲಿಂಡರ್‌ಗಳ ರೀಫಿಲ್ಲಿಂಗ್ ಪ್ರಕ್ರಿಯೆಯನ್ನು ಭಾನುವಾರ ಪರಿಶೀಲಿಸಿದರು.

ಈ ಘಟಕಗಳಿಗೆ ವಾರದಲ್ಲಿ ಎಷ್ಟು ಪ್ರಮಾಣದ ಆಮ್ಲಜನಕ ಬರುತ್ತದೆ? ಸ್ಥಳೀಯವಾಗಿ ಆಮ್ಲಜನಕ ಉತ್ಪಾದಿಸುವ ಬಗ್ಗೆ ಹಾಗೂ ಅವುಗಳನ್ನು ರೀಫಿಲ್ಲಿಂಗ್ ಮಾಡಿ ಯಾವ ಯಾವ ತಾಲ್ಲೂಕಿನ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ಪಡೆದರು.
ಜಿಲ್ಲೆಯಲ್ಲಿನ 3 ಆಮ್ಲಜನಕ ಉತ್ಪಾದನಾ ಹಾಗೂ ರೀಫಿಲ್ಲಿಂಗ್ ಘಟಕಗಳಲ್ಲಿನ ಆಮ್ಲಜನಕವನ್ನು ಆಸ್ಪತ್ರೆಗಳಲ್ಲಿನ ರೋಗಿಗಳ ಚಿಕಿತ್ಸೆಗೆ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಬೇಕು ಎಂದು ಸೂಚಿಸಿದರು.
ಜಿಲ್ಲೆಯ ಯಾವುದೇ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಆಗದಂತೆ, ಸಿಲಿಂಡರ್‌ಗಳ ಸಾಗಾಣಿಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಕೈಗಾರಿಕೆಗೆ ಬಳಸಲು ನೀಡುವ ಪ್ರಮಾಣ ಕಡಿತಗೊಳಿಸಿ, ವೈದ್ಯಕೀಯ ಕ್ಷೇತ್ರಕ್ಕೆ ಆದ್ಯತೆಯ ಮೇಲೆ ಆಮ್ಲಜನಕ ಒದಗಿಸಬೇಕು ಸ್ಥಳೀಯವಾಗಿ ಆಮ್ಲಜನಕ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಬೇಕು ಎಂದರು.

ಕೋವಿಡ್–19 ತೀವ್ರಗೊಂಡ ರೋಗಿಗಳಿಗೆ ಮಾತ್ರ ಆಮ್ಲಜನಕ ಪೂರೈಸಲಾಗುತ್ತದೆ. ಯಾರಿಗೆ ನೀಡಬೇಕು, ಯಾರಿಗೆ ಅವಶ್ಯಕತೆ ಇದೆ ಎನ್ನುವುದು ಜಿಲ್ಲಾಡಳಿತ ತೀರ್ಮಾನಿಸುತ್ತದೆ. ತೀವ್ರ ಸಂಕಷ್ಟದಲ್ಲಿರುವ ರೋಗಿಗಳಿಗೆ ಆಮ್ಲಜನಕ ಹಾಗೂ ವೆಂಟಿಲೇಟರ್ ಹಾಸಿಗೆ ನೀಡಲಾಗುವುದು ಎಂದು ಹೇಳಿದರು.

ಡ್ಯೂರೋ ಸಿಲಿಂಡರ್‌ಗಳಲ್ಲಿ ಹೆಚ್ಚಿನ ಆಮ್ಲಜನಕ ಶೇಖರಣೆ ಮಾಡಬಹುದಾಗಿದ್ದು, ಅವುಗಳನ್ನು ತಾಲ್ಲೂಕು ಆಸ್ಪತ್ರೆಗಳ ವೆಂಟಿಲೇಟರ್‌ಗಳ ಬಳಕೆಗೆ ನೀಡಬಹುದಾಗಿದೆ. ಅವುಗಳು ಎರಡು ದಿನ ಬಳಕೆಗೆ ಬರುತ್ತವೆ. ಅವುಗಳನ್ನು ವಿದೇಶದಿಂದ ತರಿಸಲು ಯೋಜನೆ ರೂಪಿಸಲಾಗಿದೆ. ಆಮ್ಲಜನಕ ಘಟಕಗಳ ಮೇಲುಸ್ತುವಾರಿಗೆ ದಿನದ 24 ಗಂಟೆಯೂ ಸರದಿಯ ಮೇಲೆ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾಹಿತಿ ನೀಡಿದರು.
ಶಾಸಕ ಡಾ. ವೈ. ಭರತ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕುಮಾರ್ ಸಹಾಯಕ ಔಷಧಿ ನಿಯಂತ್ರಕರಾದ ರಮಾಕಾಂತ್ ಕುಂಟೆ, ಶಂಕರ್ ನಾಯ್ಕ್, ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.