ಮಂಗಳೂರು: ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ನಡೆಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಮೆಟ್ರಿಕ್ ನಂತರದ ಹಾಸ್ಟೆಲ್ಗಳಲ್ಲಿ ಹೆಚ್ಚಿನವು ಬಾಡಿಗೆ ಕಟ್ಟಡದಲ್ಲಿವೆ. ಸ್ವಂತ ಕಟ್ಟಡ ನಿರ್ಮಿಸಲು ಅನುದಾನ ಲಭ್ಯವಿದ್ದರೂ, ನಿವೇಶನದ ಅಲಭ್ಯತೆಯಿಂದಾಗಿ ಅಧಿಕಾರಿಗಳು ಕೈಚೆಲ್ಲಿ ಕುಳಿತಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 13 ಹಾಸ್ಟೆಲ್ಗಳು ಇದ್ದು, ಅವುಗಳಲ್ಲಿ ಆರು ಹಾಸ್ಟೆಲ್ಗಳು 2024–25ನೇ ಸಾಲಿನಲ್ಲಿ ಮಂಜೂರು ಆಗಿವೆ. ಮಂಗಳೂರು ತಾಲ್ಲೂಕಿನಲ್ಲಿ ಏಳು ಹಾಸ್ಟೆಲ್ ಇದ್ದು, ಎರಡು ಮಾತ್ರ ಸ್ವಂತ ಕಟ್ಟಡದಲ್ಲಿವೆ. ಉಳ್ಳಾಲ ತಾಲ್ಲೂಕಿನ ಮೂರಲ್ಲಿ ಎರಡು ಸ್ವಂತ ಕಟ್ಟಡ ಹೊಂದಿವೆ. ಬಂಟ್ವಾಳದಲ್ಲಿರುವ ಒಂದು ಹಾಸ್ಟೆಲ್ಗೆ ಹೊಸ ಕಟ್ಟಡ ನಿರ್ಮಾಣವಾಗಿದೆ. ಮೂಡುಬಿದಿರೆಯಲ್ಲಿ ಒಂದು ಹಾಸ್ಟೆಲ್ ಇದ್ದು, ಸ್ವಂತ ಕಟ್ಟಡಕ್ಕೆ ಜಾಗ ಗುರುತಿಸಲಾಗಿದೆ. ಕಡಬದ ಹಾಸ್ಟೆಲ್ನಲ್ಲಿ ಮೌಲಾನಾ ಆಝಾದ್ ಶಾಲೆ ನಡೆಯುತ್ತಿದೆ.

‘ಏಳು ಹಾಸ್ಟೆಲ್ಗಳು ಬಾಡಿಗೆ ಕಟ್ಟಡದಲ್ಲಿವೆ. ಉಳ್ಳಾಲ ತಾಲ್ಲೂಕಿನ ಒಂದು ಹಾಸ್ಟೆಲ್ಗೆ ಆರು ತಿಂಗಳುಗಳಿಂದ ಜಾಗ ಹುಡುಕುತ್ತಿದ್ದೇವೆ. ಕೊಣಾಜೆ, ಮುನ್ನೂರು, ದೇರಳಕಟ್ಟೆ ಸುತ್ತಮುತ್ತ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯಕ್ಕೆ ಅನುಕೂಲವಾಗುವ ನಿವೇಶನಗಳೇ ದೊರೆಯುತ್ತಿಲ್ಲ. ಕಚೇರಿಯಲ್ಲಿ ಬಿಡುವಿದ್ದಾಗಲೆಲ್ಲ ಜಾಗ ಹುಡುಕಲು ಅಲೆದಾಡುವುದೇ ಆಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಮಂಗಳೂರು ತಾಲ್ಲೂಕಿನಲ್ಲೇ ಸಮಸ್ಯೆ ಹೆಚ್ಚಿದೆ, ಸ್ವಂತ ಕಟ್ಟಡ ನಿರ್ಮಾಣಕ್ಕೆ ಜಾಗ ಸಿಗುತ್ತಿಲ್ಲ. ಗಂಡು ಮಕ್ಕಳ ಒಂದು ವಸತಿ ನಿಲಯಕ್ಕೆ ನೀರುಮಾರ್ಗದ ಸಮೀಪ, ಮೂಡುಬಿದಿರೆ ತಾಲ್ಲೂಕಿನ ಹಾಸ್ಟೆಲ್ಗೆ ತೋಡಾರು ಸಮೀಪ ಜಾಗ ಗುರುತಿಸಲಾಗಿದೆ. ಒಂದು ವಸತಿ ನಿಲಯಕ್ಕೆ ಕನಿಷ್ಠ 50 ಸೆಂಟ್ಸ್ ಜಾಗ ಬೇಕಾಗುತ್ತದೆ. ನಿವೇಶನ ದೊರೆತರೆ ಸರ್ಕಾರ ಶೀಘ್ರ ಅನುದಾನ ಒದಗಿಸುತ್ತದೆ. ಬಾಡಿಗೆ ಕಟ್ಟಡದಲ್ಲಿರುವ ವಸತಿ ನಿಲಯಗಳಿಗೆ ಪ್ರಸ್ತುತ ತಿಂಗಳಿಗೆ ಒಟ್ಟು ₹2 ಲಕ್ಷದಷ್ಟು ಬಾಡಿಗೆ ಪಾವತಿಸಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

‘ಹೊರ ಜಿಲ್ಲೆಯ ವಿದ್ಯಾರ್ಥಿಗಳು ವಿದ್ಯಾರ್ಜನೆಯಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಬರುವುದರಿಂದ ಇಲ್ಲಿ ಹಾಸ್ಟೆಲ್ಗೆ ಬೇಡಿಕೆ ಹೆಚ್ಚು. ಹೆಚ್ಚುವರಿ ವಸತಿ ನಿಲಯಗಳ ಅಗತ್ಯ ಇದೆ. ಆದರೆ, 13 ವಸತಿ ನಿಲಯಗಳಿಂದ ಒಬ್ಬರು ವಾರ್ಡನ್ ಮಾತ್ರ ಇದ್ದಾರೆ. ಉಳಿದ ವಸತಿ ನಿಲಯಗಳಿಗೆ ಶಿಕ್ಷಕರು, ಬೇರೆ ಇಲಾಖೆಯವರನ್ನು ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ’ ಎಂದು ಇಲಾಖೆಯ ಸಿಬ್ಬಂದಿಯೊಬ್ಬರು ತಿಳಿಸಿದರು.

ಹಾಸ್ಟೆಲ್ಗಳಲ್ಲಿ ಸೀಟ್ ಸಿಗದವರಿಗೆ ಸರ್ಕಾರ ವಿದ್ಯಾಸಿರಿ ಯೋಜನೆಯಡಿ ನೆರವು ನೀಡುತ್ತದೆ. ಕಳೆದ ವರ್ಷ 760 ವಿದ್ಯಾರ್ಥಿಗಳಿಗೆ ಒಟ್ಟು ₹1.14 ಕೋಟಿ ಪಾವತಿಯಾಗಿದೆ.
ಜಿನೇಂದ್ರ ಕೋಟ್ಯಾನ್ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.