ಉಳ್ಳಾಲ (ಮಂಗಳೂರು ತಾ.): ಇಲ್ಲಿನ ಬ್ರಹ್ಮಶ್ರೀ ಬಿಲ್ಲವ ವೇದಿಕೆಯು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕೊಡಮಾಡಿದ ‘ಬಿಲ್ಲವ ಶ್ರೀ’ ಪ್ರಶಸ್ತಿಯನ್ನು, ಅವರು ಸ್ವೀಕರಿಸುವ ಬದಲಾಗಿ ಕಾಂಗ್ರೆಸ್‌ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರಿಗೆ ಸಮರ್ಪಿಸಿದರು.

ಇಲ್ಲಿನ ಕಾಪಿಕಾಡ್ ಗಟ್ಟಿ ಸಮಾಜ ಭವನದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಳಿನ್ ಕುಮಾರ್, ‘ಪ್ರಶಸ್ತಿ, ಪುರಸ್ಕಾರಗಳು 60 ವರ್ಷದ ನಂತರ ಪಡೆಯುವುದು ಯೋಗ್ಯ. ನಾನು ಪ್ರಶಸ್ತಿ ಸ್ವೀಕರಿಸುವುದಿಲ್ಲ. ಅಂತಹ ಸಾಧನೆಗಳನ್ನು ಮಾಡಿಲ್ಲ. ‘ಬಿಲ್ಲವ ಶ್ರೀ’ ಪುರಸ್ಕಾರಕ್ಕೆ ಜನಾರ್ದನ ಪೂಜಾರಿ ಅವರೇ ಅರ್ಹರು’ ಎಂದರು.

‘ಪ್ರತಿ ಚುನಾವಣೆಯಲ್ಲೂ ಜನಾರ್ದನ ಪೂಜಾರಿ ಅವರ ಆಶೀರ್ವಾದ ಪಡೆದಿದ್ದೇನೆ. ಅವರು ಕಳಂಕವಿಲ್ಲದ, ಭ್ರಷ್ಟಾಚಾರ ರಹಿತ ರಾಜಕಾರಣಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.