ಕಾಸರಗೋಡು: ತುಳು ಕ್ಯಾಲೆಂಡರ್ ಕಾಲ ಕೋಂದೆಯ ನೂತನ ಆವೃತ್ತಿ ಮತ್ತು ತುಳು-ಕನ್ನಡ ಕಲಿಕಾ ಪುಸ್ತಕವನ್ನು ಮಂಗಳವಾರ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಯಿತು.

ತುಳು ಅಕಾಡೆಮಿ ವತಿಯಿಂದ 11 ವರ್ಷಗಳಿಂದ ಈ ಕ್ಯಾಲೆಂಡರ್ ಪ್ರಕಟಿಸಲಾಗುತ್ತಿದ್ದು, ತುಳುನಾಡಿನ ಹಬ್ಬ, ಆಚರಣೆ, ಕಾಲ ಇತ್ಯಾದಿ ಸಮಗ್ರ ಮಾಹಿತಿಯನ್ನು ಹೊಂದಿದೆ. ತೌಳವ ಗಣಕೀಕರಣ ಲಿಪಿ ತಂತ್ರಾಂಶದ ಸಹಾಯದೊಂದಿಗೆ ಈ ಕ್ಯಾಲೆಂಡರ್ ಪ್ರಕಟಿಸಲಾಗಿದೆ. ತುಳು-ಕನ್ನಡ ಕಲಿಕಾ ಪುಸ್ತಕವು ತುಳು ಅಕ್ಷರ ಸಹಿತ ವಿವಿಧ ವಿಚಾರಗಳ ಮಾಹಿತಿ ಒಳಗೊಂಡಿದೆ.

ಶಾಸಕ ಎನ್.ಎ.ನೆಲ್ಲಿಕುನ್ನು ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಕೇರಳ ತುಳು ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ತುಳು-ಕನ್ನಡ ಕಲಿಕಾ ಪುಸ್ತಕ ಬಿಡುಗಡೆಗೊಳಿಸಿದರು. ತೌಳವ ಗಣಕೀಕೃತ ವಿನ್ಯಾಸಕಾರ ಡಾ.ಪ್ರವೀಣ್ ರಾಜ್ ಎಸ್.ರಾವ್, ರಾಮಕೃಷ್ಣ ಎಸ್. ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.