ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

₹10 ಲಕ್ಷ ಬಾಡಿಗೆ ಮನ್ನಾ ಮಾಡಿದ ಮಾಲೀಕ

Last Updated 4 ಜೂನ್ 2020, 22:23 IST
ಅಕ್ಷರ ಗಾತ್ರ

ಬಂಟ್ವಾಳ: ವಸತಿ ಮತ್ತು ವಾಣಿಜ್ಯ ಸಂಕೀರ್ಣದ ಮಾಲೀಕ ರೊಬ್ಬರು ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಬಾಡಿಗೆದಾರರ ಬಾಡಿಗೆ ಮನ್ನಾ ಮಾಡಿದ್ದಾರೆ.

ಬಂಟ್ವಾಳ ಕೆಳಗಿನಪೇಟೆ ನಿವಾಸಿ, ಸೌದಿ ಅರೇಬಿಯಾದಲ್ಲಿನ ಯುವ ಉದ್ಯಮಿ ಇಕ್ಬಾಲ್ ನಿಶ್ಬಾ ಅವರು ತಮ್ಮ ಒಡೆತನದಲ್ಲಿರುವ ಬಿ.ಸಿ. ರೋಡು, ಬಂಟ್ವಾಳ, ಉಪ್ಪಳ ಹಾಗೂ ಮಂಗ ಳೂರಿನಲ್ಲಿರುವ ವಸತಿ ಮತ್ತು ವಾಣಿಜ್ಯ ಸಂಕೀರ್ಣದ ಬಾಡಿಗೆದಾರರಿಗೆ ಎರಡು ತಿಂಗಳ ಬಾಡಿಗೆ ಸುಮಾರು ₹ 10 ಲಕ್ಷ ಮನ್ನಾ ಮಾಡಿದ್ದಾರೆ.

ಬಂಟ್ವಾಳ- ಕೆಳಗಿನಪೇಟೆಯಲ್ಲಿ ಬಂಟ್ವಾಳ ಜಮಾತೆ ಮತ್ತು ಎಸ್‌ಕೆಎಸ್‌ಎಸ್‌ಎಫ್ ವತಿಯಿಂದ ಸ್ಥಾಪಿಸಲಾದ ಲಾಕ್‌ಡೌನ್ ರಿಲೀಫ್ ಫಂಡ್‌ಗೂ ದೇಣಿಗೆ ನೀಡಿದ್ದಾರೆ.

‘ಇಲ್ಲಿನ ಸಾಮಾಜಿಕ ಚಟುವಟಿಕೆ ಗಳಗೆ ಪ್ರೋತ್ಸಾಹ ನೀಡುತ್ತಿರುವ ಇಕ್ಬಾಲ್ ಇತರರಿಗೆ ಮಾದರಿ’ ಎಂದು ಸಮಾಜಸೇವಕ ಹಾರುನ್ ರಶೀದ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT