ಆಶ್ರಮವಾಸಿಗಳಿಗೆ ಉಚಿತ ಸೇವೆ

ಉಜಿರೆ: ನೆರಿಯಾ ಗ್ರಾಮದಲ್ಲಿರುವ ಸಿಯೋನ್ ಆಶ್ರಮವಾಸಿಗಳಿಗೆ ಮುಂಡಾಜೆ ಗ್ರಾಮದ ರವಿಚಂದ್ರ ಭಂಡಾರಿ ಉಚಿತ ಕ್ಷೌರ ಸೇವೆ ಒದಗಿಸಲು ಸಂಕಲ್ಪ ಮಾಡಿದ್ದಾರೆ.
ಆಶ್ರಮದಲ್ಲಿ ಸುಮಾರು 150 ಮಂದಿ ಪುರುಷರಿದ್ದು, ಪ್ರತಿ ತಿಂಗಳು ಆಶ್ರಮಕ್ಕೆ ಹೋಗಿ ಅವರ ಸೇವೆ ಮಾಡುವುದಾಗಿ ಅವರು ತಿಳಿಸಿದ್ದಾರೆ. ಮುಂಡಾಜೆ ಗ್ರಾಮದ ಸೋಮಂತಡ್ಕದಲ್ಲಿ ಸ್ವಂತ ಸೆಲೂನ್ ಹೊಂದಿರುವ ರವಿಚಂದ್ರ ಭಂಡಾರಿ, ಐದು ವರ್ಷಗಳಿಂದ ಮರಿಯಾ ನಿಕೇತನ ವಿಶೇಷ ಮಕ್ಕಳ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಕ್ಷೌರ ಮಾಡುತ್ತಿದ್ದಾರೆ.
ರವಿಚಂದ್ರ ಭಂಡಾರಿಯವರ ಸೇವೆ ಆಶ್ರಮಕ್ಕೆ ಉತ್ತಮ ಕೊಡುಗೆಯಾಗಿದೆ ಎಂದು ಹೇಳಿ ಸಿಯೋನ್ ಆಶ್ರಮದ ಸಂಚಾಲಕ ಯು. ಸಿ ಪೌಲೋಸ್ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಆಶ್ರಮಕ್ಕೆ ಉತ್ತಮ ಸೇವೆ ನೀಡುವ ದಾದಿಯರ ಅವಶ್ಯಕತೆ ಇದೆ ಎಂದು ಅವರು ತಿಳಿಸಿದ್ದಾರೆ. ಆಶ್ರಮದಲ್ಲಿ 220 ವೃದ್ಧರು, ನಿರ್ಗತಿಕರು, ಬುದ್ಧಿಮಾಂದ್ಯರು ಹಾಗೂ ಅಂಗವಿಕಲರು ಇದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.