ಉಜಿರೆ: ಚಾರ್ಮಾಡಿ ಘಾಟಿ ರಸ್ತೆಮಧ್ಯೆ ವಾಹನ ನಿಲ್ಲಿಸಿ ಪ್ರವಾಸಿಗರು ಮೋಜು ಮಸ್ತಿ ಮಾಡಿ ಸುಗಮ ಸಂಚಾರಕ್ಕೆ ತಡೆಯಂಟುಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲು ನಿರ್ಧರಿಸಲಾಗಿದೆ. ಬುಧವಾರವೇ ಇದು ಜಾರಿಗೆ ಬಂದಿದೆ. ಎಚ್ಚರಿಕೆ ಫಲಕಗಳನ್ನೂ ಅಳವಡಿಸಲಾಗಿದೆ.
ಸುಂದರ ವನರಾಶಿ, ಜಲಧಾರೆ ಇರುವ ಈ ರಸ್ತೆ ಬದಿಯಲ್ಲಿ ಅಪಾಯಕಾರಿ ತೊರೆಗಳೂ ಇವೆ. ಪ್ರವಾಸಿಗರು ಹಳ್ಳಗಳಿಗೆ ಇಳಿಯುವುದು, ಅಪಾಯದ ಸ್ಥಳಗಳಲ್ಲಿ ಮತ್ತು ತಿರುವುಗಳಲ್ಲಿ ಸೆಲ್ಫಿಗೆ ಮುಗಿಬೀಳುವುದು, ರಸ್ತೆ ಮಧ್ಯೆ ಕುಣಿದು ಕುಪ್ಪಳಿಸುವುದು ಇತ್ಯಾದಿ ಚಟುವಟಿಕೆಗಳಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.