ಉಳ್ಳಾಲ: ಇಲ್ಲಿಗೆ ಸಮೀಪದ ಕೋಟೆಕಾರು ರಿಕ್ಷಾ ನಿಲ್ದಾಣದ ಬಳಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ರಿಕ್ಷಾ ಚಾಲಕ ಬುಧವಾರ ಮೃತಪಟ್ಟಿದ್ದಾರೆ.
‘ಅಬ್ದುಲ್ ಅಜೀಜ್ (54) ಮೃತರು. ಸೋಮೇಶ್ವರ ಕಡೆಯಿಂದ ಕೋಟೆಕಾರಿಗೆ ರಿಕ್ಷಾ ಚಲಾಯಿಸಿಕೊಂಡು ಮಂಗಳವಾರ ಹೋಗಿದ್ದರು. ಅವರು ರಿಕ್ಷಾ ನಿಲ್ದಾಣದ ಬಳಿ ಆಯತಪ್ಪಿ ವಾಹನದಿಂದ ಹೊರಗೆ ಬಿದ್ದಿದ್ದರು. ಅವರ ರಿಕ್ಷಾವು ನಿಲ್ದಾಣದಲ್ಲಿದ್ದ ನಿತ್ಯಾನಂದ ಅವರ ರಿಕ್ಷಾಕ್ಜೆ ಡಿಕ್ಕಿ ಹೊಡೆದಿತ್ತು. ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಅಜೀಜ್ ಅವರನ್ನು ದೇರಳಕಟ್ಟೆಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಸಂಚಾರ ದಕ್ಷಿಣ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ‘ ಎಂದು ಪೊಲೀಸರು ತಿಳಿಸಿದ್ದಾರೆ.