ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಟ್ಯಾಂಕರ್‌ ಡಿಕ್ಕಿ: ಸ್ಕೂಟರ್‌ ಸವಾರ ಸಾವು

Published 27 ಮೇ 2024, 6:06 IST
Last Updated 27 ಮೇ 2024, 6:06 IST
ಅಕ್ಷರ ಗಾತ್ರ

ಮಂಗಳೂರು: ನಗರದ ಕುಂಟಿಕಾನ ಬಳಿಯ ಲೋಹಿತ್‌ ನಗರದಲ್ಲಿ ರಾಷ್ಟ್ರೀಯ ಹೆದ್ದರಿ 66ರಲ್ಲಿ ಟ್ಯಾಂಕರ್‌ ಅಡಿ ಸಿಲುಕಿ ಸ್ಕೂಟರ್ ಸವಾರರೊಬ್ಬರು ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.

ಮೃತರನ್ನು ಬೋಳಾರದ ಗೌರವ್ ಎಚ್ (29) ಎಂದು ಗುರುತಿಸಲಾಗಿದೆ. ಹೋಟೆಲ್ ನಿರ್ವಹಣೆ ಕುರಿತು ಪದವಿ ಪಡೆದಿದ್ದ ಅವರು ಕೂಳೂರಿನ ಹೋಟೆಲ್ ಒಂದರಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು.

‘ಗೌರವ್‌ ಅವರು ಕೂಳೂರಿನಿಂದ ಬೋಳಾರಕ್ಕೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಟ್ಯಾಂಕರ್‌ ಡಿಕ್ಕಿ ಹೊಡೆದಿತ್ತು. ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಅವರ ಎದೆಯ ಮೇಲೆ ಟ್ಯಾಂಕರ್‌ನ ಎಡಬದಿಯ ಮುಂಬದಿ ಮತ್ತು ಹಿಂಬದಿಯ ಚಕ್ರಗಳು ಹರಿದಿದ್ದವು. ಸ್ಥಳದಲ್ಲಿದ್ದವರು ಅವರನ್ನು ಎ.ಜೆ. ಆಸ್ಪತ್ರೆಗೆ ಕರೆದೊಯ್ದಿದ್ದರು. ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು ಎಂದು ವೈದ್ಯರು ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT