ಮಂಗಳೂರು: ಶಕ್ತಿನಗರದ ಶಕ್ತಿ ಪದವಿಪೂರ್ವ ಕಾಲೇಜು ವಿಜ್ಞಾನ ವಿಭಾಗದಲ್ಲಿ ಶೇ 100ರಷ್ಟು ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ 97.2ರಷ್ಟು ಫಲಿತಾಂಶ ಲಭಿಸಿದೆ.

ವಾಣಿಜ್ಯ ವಿಭಾಗದ (ಎಸ್ಇಬಿಎ) ಅರ್ಚನ ಎನ್.ಕೆ. 593 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 5ನೇ ರ್ಯಾಂಕ್ ಹಾಗೂ ವಿಜ್ಞಾನ ವಿಭಾಗದ ರೋಹಿತ್ ಕಲ್ಲೂರಾಯ 589 ಅಂಕ ಗಳಿಸಿ ರಾಜ್ಯಕ್ಕೆ 10ನೇ ರ್ಯಾಂಕ್ ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಒಟ್ಟು 211 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 129 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 79 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಪಿಸಿಎಂಸಿಯಲ್ಲಿ ರೋಹಿತ್ ಕಲ್ಲೂರಾಯ 589 ಅಂಕ, ಪಿಸಿಎಂಬಿಯಲ್ಲಿ ಮೌನ ಜಿ. 585 ಅಂಕ, ಪಿಸಿಎಂಸಿಯಲ್ಲಿ ಪ್ರತಿಕ್ಷಾ ಬಿ.ಪಿ.584 ಅಂಕ, ದೇವಿಕಾ ಸಿ.ಪೈ 584, ಸ್ವಪ್ನ 581, ಕಾವ್ಯ ಡಿ ಮಾರ್ಲ 581, ಕಾರ್ತಿಕ್ ಎಚ್.ಎಸ್ 580, ಮಿಥಾಲಿ ಆರ್ ಅಮಿನ್ 579, ಎನ್ ಹಿತೇಶ್ ಕುಮಾರ್ 578, ಪ್ರಥಮೇಶ್ ಶೆಣೈ ಕುಡ್ಪಿ 577, ವಂಶಿ ಎಚ್ ಆರ್ 575 ಅಂಕ ಗಳಿಸಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಒಟ್ಟು 68 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 66 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 20 ಮಂದಿ ವಿಶಿಷ್ಟ ಶ್ರೇಣಿ, 36 ಮಂದಿ ಪ್ರಥಮ ಶ್ರೇಣಿ, 08 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಾಣಿಜ್ಯ ವಿಭಾಗದ ಸಿಇಬಿಎಯ ನಿಹಾರೀಕ ಕೆ.ಆರ್ 586 ಅಂಕ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.