ಭಾನುವಾರ, ಫೆಬ್ರವರಿ 23, 2020
19 °C
ಕಣ್ಣು ರಕ್ಷಣೆಯ ಉಪಕರಣ ಬಳಸಿ ಗ್ರಹಣ ವೀಕ್ಷಿಸಲು ಸಲಹೆ

ಕಾಸರಗೋಡು: ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಕಾಸರಗೋಡು: ‘ಇದೇ 26ರಂದು ನಡೆಯುವ ಸೂರ್ಯಗ್ರಹಣ (ಕಂಕಣ ಗ್ರಹಣ)ವನ್ನು ವೀಕ್ಷಿಸಬಹುದಾದ ಜಗತ್ತಿನ ಮೂರು ಪ್ರಮುಖ ಜಾಗಗಳಲ್ಲಿ ಜಿಲ್ಲೆಯ ಚೆರುವತ್ತೂರು ಒಂದು. ಇಲ್ಲಿನ ಕಾಡಂಗೋಡಿನ ಸಾರ್ವಜನಿಕ ಪ್ರದೇಶದಲ್ಲಿ ಸಾರ್ವಜನಿಕರು ವೀಕ್ಷಿಸಲು ಎಲ್ಲ ವೈಜ್ಞಾನಿಕ ವಿಧಾನದ ದ್ಧತೆ ನಡೆಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.

ಬೆಳಗ್ಗೆ 8.04 ಕ್ಕೆ ಆರಂಭಗೊಳ್ಳುವ ಭಾಗಶಃ ಗ್ರಹಣ 9.25ರ ವೇಳೆಗೆ ಪೂರ್ಣ ರೂಪ ತಲಪಲಿದೆ. ಮೂರು
ನಿಮಿಷ, 12 ಸೆಕಂಡ್ ವರೆಗೆ ಮುಂದುವರಿದು 11.04ರ ವೇಳೆಗೆ ಕೊನೆಗೊಳ್ಳಲಿದೆ. ಮಂಗಳೂರಿನಿಂದ
ಬೇಪೂರು ವರೆಗೆ ಅರ್ಧಾಂಶ ಗೋಚರಿಸಲಿದೆ. ಖತಾರ್, ಯು.ಎ.ಇ., ಒಮಾನ್ ದೇಶಗಳಲ್ಲಿ
ಗ್ರಹಣ ಆರಂಭದ ದೃಶ್ಯ ಗೋಷರಗೊಳ್ಳಲಿದೆ. ಕಣ್ಣೂರು, ವಯನಾಡ್ ಜಿಲ್ಲೆಗಳ ಮಾತಮಂಗಲಂ, ಪನ್ನಿಯೂರು, ಪೇರಾವೂರು,
ಮೀನಾಂಗಾಡಿ, ಚುಳ್ಳಿಯೋಡ್ ಪ್ರದೇಶಗಳಲ್ಲಿ ಈ ದೃಶ್ಯ ಕಾಣಬಹುದಾಗಿದೆ.

ಭಾರತದಲ್ಲಿ ಪ್ರಥಮ ಬಾರಿಗೆ ಕಾಣಿಸಲಿರುವುದು ಜಿಲ್ಲೆಯ ಚೆರುವತ್ತೂರಿನಲ್ಲಿ ಎಂಬುದು ವಿಶೇಷ.
ಈ ಪ್ರದೇಶದ ಭೌಗೋಲಿಕ ವಿಶೇಷತೆಯಿಂದಾಗಿ ಈ ದೃಶ್ಯ ಇಲ್ಲಿ ಸ್ಪಷ್ಟವಾಗಿ ಗೋಚರವಾಗಲು ಕಾರಣ ಎಂದು
ತಾಂತ್ರಿಕ ಸೌಲಭ್ಯಗಳೊಂದಿಗೆ ಗ್ರಹಣವೀಕ್ಷಣೆಗೆ ವ್ಯವಸ್ಥೆ ಏರ್ಪಡಿಸುವ ‘ಸ್ಪೇಸ್ ಇಂಡಿಯಾ’ ಸಂಸ್ಥೆಯ
ಸಿ.ಎಂ.ಡಿ.ಸಚಿನ್ ಬಂಬೆ ತಿಳಿಸಿದರು.

ಇವರು ಜ್ಯೋತಿರ್ ವಿಜ್ಞಾನ ಕುರಿತು ಸಾರ್ವಜನಿಕ ವಲಯದಲ್ಲಿ ಹರಡಿಕೊಂಡಿರುವ ತಪ್ಪುಕಲ್ಪನೆ  ನಿವಾರಿಸಿ, ಜಾಗೃತಿ ಮೂಡಿಸುವುದು, ಆಸ್ಟರೊ ಟೂರಿಸಂ ಪ್ರಚಾರಕರಾಗಿದ್ದಾರೆ. ಬರಿ ಕಣ್ಣುಗಳಿಂದ ಸೂರ್ಯಗ್ರಹಣ ನೋಡಬೇಡಿ ಎಂದು ಮುನ್ನಚ್ಚರಿಕೆ ನೀಡಿದ್ದಾರೆ.

‘ಪೂರ್ಣಗ್ರಹಣ (ಕಂಕಣ ಗ್ರಹಣ)ವೇಳೆ ಹಬ್ಬುವ ಕತ್ತಲ ಸಂದರ್ಭ ಸಾರ್ವಜನಿಕರು  ಹೊರಗಿಳಿಯಬಾರದು. ಗ್ರಹಣದ ಕೊನೆಯಲ್ಲಿ  ಸೂರ್ಯ ಕಿರಣಗಳು  ದೊಡ್ಡ ಪ್ರಮಾಣದಲ್ಲಿ ನೇರವಾಗಿ ಕಣ್ಣಿಗೆ ತಾಕುವ ಭೀತಿಯಿದೆ. ಬೆಳಕು ಕಡಿಮೆಯಿರುವ ಸಂದರ್ಭ ಕಣ್ಣುಗಳಲ್ಲಿ ಬೆಳಕು ಒಳಪ್ರವೇಶಿಸುವ ರಂಧ್ರ ಹೆಚ್ಚು ತೆರೆದಿರುತ್ತದೆ,  ಆಗ ಸೂರ್ಯನ ಪ್ರಖರ ಕಿರಣಗಳನ್ನು ವೀಕ್ಷಿಸುವಂತಾದರೆ ದೃಷ್ಟಿಗೆ ತೊಂದರೆ ಉಂಟಾಗಲಿದೆ’ ಎಂದವರು ತಿಳಿಸಿದರು.

‘ಜನರು ಕಣ್ಣುಳಿಗೆ ರಕ್ಷಣೆನೀಡಬಲ್ಲ ಉಪಕರಣಗಳನ್ನು ಬಳಸಿ ಮಾತ್ರ ಸೂರ್ಯಗ್ರಹಣ ವೀಕ್ಷಿಸಬೇಕು’
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸಾರ್ವಜನಿಕರಿಗೆ ಸಲಹೆ ಮಾಡಿದ್ದಾರೆ. ಗ್ರಹಣ ವೀಕ್ಷಣೆಗೆ ಚೆರುವತ್ತೂರಿನ
ಕಾಡಂಗೋಡಿನಲ್ಲಿ ವೈಜ್ಞಾನಿಕ ರೀತಿಯ ಸೌಲಭ್ಯ ಏರ್ಪಡಿಸಿದ್ದು, ಸಾರ್ವಜನಿಕರು ಗರಿಷ್ಠ ಪ್ರಯೋಜನ ಪಡೆಯಬೇಕು’ ಎಂದು   ಅವರು ಆಗ್ರಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)