ಬುಧವಾರ, ಸೆಪ್ಟೆಂಬರ್ 29, 2021
20 °C

ಮಂಗಳೂರು: ಕೋವಿಡ್ ತಗುಲಿರುವ ಆತಂಕ, ದಂಪತಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಕೋವಿಡ್ ತಗುಲಿದೆ ಎಂಬ ಭಯದಲ್ಲಿ ದಂಪತಿ, ನಗರ ಪೊಲೀಸ್ ಕಮಿಷನರ್‌ಗೆ ವಾಟ್ಸ್‌ಆ್ಯಪ್‌ನಲ್ಲಿ ಧ್ವನಿ ಮುದ್ರಣ ಕಳುಹಿಸಿ, ಆತ್ಮಹತ್ಯೆಗೆ ಶರಣಾಗಿದ್ದಾರೆ.

ಉದ್ಯಮಿ ರಮೇಶ ಸುವರ್ಣ ತಾನು ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾರೆ.

‘ಕೋವಿಡ್ ಬಂದಿರುವ ಕಾರಣಕ್ಕೆ ನಾವಿಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರಿಗೆ ಕಳುಹಿಸಿರುವ ಧ್ವನಿ ಮುದ್ರಣದಲ್ಲಿ ಅವರು ತಿಳಿಸಿದ್ದರು.

ಆ ವ್ಯಕ್ತಿ ಕರೆಯನ್ನು ಸ್ವೀಕರಿಸುತ್ತಿಲ್ಲದ ಕಾರಣ ಪೊಲೀಸ್ ಕಮಿಷನರ್ ಪುನಃ ಧ್ವನಿ ಮುದ್ರಣ‌ ಕಳುಹಿಸಿ, ಆತ್ಮಹತ್ಯೆ ಮಾಡಿಕೊಳ್ಳದಂತೆ ವಿನಂತಿಸಿದ್ದರು. ಮತ್ತು ಆ ವ್ಯಕ್ತಿಯ ಬಗ್ಗೆ ತಿಳಿದವರು ಅವರನ್ನು ರಕ್ಷಿಸುವಂತೆ ವಿ‌ನಂತಿಸಿದ್ದರು. ಅವರು ಇರುವ ಸ್ಥಳದ ಲೊಕೇಷನ್ ಪತ್ತೆ ಮಾಡುವಲ್ಲಿ ಪೊಲೀಸರು ಸಾಕಷ್ಟು ಶ್ರಮಪಟ್ಟರು.

ಪಣಂಬೂರಿನ ಚಿತ್ರಾಪುರ ಬೀಚ್ ರಸ್ತೆಯಲ್ಲಿರುವ ಫ್ಲ್ಯಾಟ್ ಪತ್ತೆ ಮಾಡಿ, ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

‘ನಮ್ಮ ಅಂತ್ಯ ಸಂಸ್ಕಾರಕ್ಜೆ ₹ 1 ಲಕ್ಷ ಹಣ ತೆಗೆದು ಇಟ್ಟಿದ್ದೇವೆ. ಸತ್ಯಜಿತ್ ಸುರತ್ಕಲ್, ಶರಣ್ ಪಂಪ್ ವೆಲ್ ನಮ್ಮ ಅಂತ್ಯ ಸಂಸ್ಕಾರ ಮಾಡಲಿ’ ಎಂದು ಪತ್ನಿ ಗುಣ ಸುವರ್ಣ ಡೆತ್ ನೋಟ್ ಬರೆದು ಇಟ್ಟಿದ್ದಾರೆ.

ಅದರಲ್ಲಿ ತಮ್ಮ ಹಿನ್ನೆಲೆ, ಮಕ್ಕಳಿಲ್ಲದ ಬಗ್ಗೆ ಆಗಿರುವ ನೋವಿನ ಬಗ್ಗೆಯೂ ಹೇಳಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು