ಭಾನುವಾರ, ಜೂಲೈ 5, 2020
28 °C

70 ವರ್ಷದ ವೃದ್ಧ ಸಹಿತ 13 ಮಂದಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: 70 ವರ್ಷದ ವೃದ್ಧ, 58 ವರ್ಷದ ಮಹಿಳೆ, ಮೂರು ವರ್ಷದ ಬಾಲಕಿ ಸಹಿತ 13 ಮಂದಿ ಕೊರೊನಾ ವೈರಸ್‌ನಿಂದ ಗುಣಮುಖರಾಗಿ ಗುರುವಾರ ಬಿಡುಗಡೆಗೊಂಡಿದ್ದಾರೆ.

ವಯಸ್ಸಾದವರು, ಸಣ್ಣ ಮಕ್ಕಳು ಸಹಿತ ಯಾರಿಗೇ ಸೋಂಕು ಬಂದರೂ ಗುಣಮುಖರಾಗಬಹುದು. ಯಾರೂ ಹೆದರುವ ಅವಶ್ಯಕತೆ ಇಲ್ಲ ಎಂಬುದನ್ನು ಇದು ತೋರಿಸಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಮೇ 3ರಂದು ಸೋಂಕು ದೃಢಪಟ್ಟಿದ್ದ 30 ಮತ್ತು 25 ವರ್ಷದ ಯುವಕರು (ಪಿ. 615, ಪಿ.626), 70 ವರ್ಷದ ವೃದ್ಧ (ಪಿ. 633), 42 ವರ್ಷದ ವ್ಯಕ್ತಿ (ಪಿ.634), ಮೇ 8ರಂದು ಸೋಂಕು ಪತ್ತೆಯಾಗಿದ್ದ 27 ಮತ್ತು 38 ವರ್ಷದ ಮಹಿಳೆಯರು (ಪಿ. 727, ಪಿ.737), ಮೂರು ವರ್ಷದ ಬಾಲಕಿ (ಪಿ. 733), ಮೇ 9ರಂದು ಸೋಂಕು ಖಚಿತಪಟ್ಟಿದ್ದ 24 ಮತ್ತು 48 ವ್ಷದ ಪುರುಷರು (ಪಿ. 756, ಪಿ.776), ಮೇ 11 ರಂದು ಪಾಸಿಟಿವ್‌ ಬಂದಿದ್ದ 30 ವರ್ಷದ ಮಹಿಳೆ (ಪಿ.851), 18ರಂದು ಸೋಂಕು ಇರುವುದು ಗೊತ್ತಾಗಿದ್ದ 24 ವರ್ಷದ ಯುವಕ (ಪಿ. 1186), 19ರಂದು ವೈರಸ್‌ ಇರುವುದು ಪತ್ತೆಯಾಗಿದ್ದ 27 ವರ್ಷದ ಯುವಕ (ಪಿ.1248) ಮತ್ತು 58 ವರ್ಷದ ಮಹಿಳೆ (1249) ಬಿಡುಗಡೆಗೊಂಡವರು.

ಗುರುವಾರ ಯಾವುದೇ ಪಾಸಿಟಿವ್‌ ಪ್ರಕರಣ ಬಂದಿಲ್ಲ. ಇಲ್ಲಿವರೆಗೆ ಒಟ್ಟು 142 ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. 79 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಕ್ರಿಯ 59 ಪ್ರಕರಣಗಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು