ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಂಕದಕಟ್ಟೆ: ನರಸಿಂಹಸ್ವಾಮಿ, ಮಂಜುನಾಥ ಸ್ವಾಮಿ ಹುಂಡಿಯಲ್ಲಿ ₹46.77 ಲಕ್ಷ ಸಂಗ್ರಹ

Published 29 ಮೇ 2024, 6:52 IST
Last Updated 29 ಮೇ 2024, 6:52 IST
ಅಕ್ಷರ ಗಾತ್ರ

ಹೊನ್ನಾಳಿ: ‘ಎ’ ಗ್ರೇಡ್ ಮುಜರಾಯಿ ವಿಭಾಗಕ್ಕೆ ಸೇರಿದ ಸುಂಕದಕಟ್ಟೆ ಗ್ರಾಮದ ನರಸಿಂಹಸ್ವಾಮಿ, ಮಂಜುನಾಥ ಸ್ವಾಮಿ ದೇವರ ಹುಂಡಿಯನ್ನು ಮಂಗಳವಾರ ಗ್ರಾಮಸ್ಥರ ಸಮ್ಮುಖದಲ್ಲಿ, ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳ ನೇತೃತ್ವದಲ್ಲಿ ತೆರೆಯಲಾಯಿತು.

ಹುಂಡಿಯನ್ನು 6 ತಿಂಗಳಿಗೊಮ್ಮೆ ತೆರೆದು ಮಾಡಿ ಎಣಿಕೆ ಮಾಡುವ ಪದ್ಧತಿ ಇದೆ. ಮಂಗಳವಾರ ಎಣಿಕೆ ಮಾಡಿದ ಸಂದರ್ಭದಲ್ಲಿ ₹ 46.77 ಲಕ್ಷ ಹುಂಡಿಯಲ್ಲಿ ಸಂಗ್ರಹವಾಗಿದೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದರು.

‘ಮುಜರಾಯಿ ದೇವಸ್ಥಾನದ ಖಾತೆ ಇರುವ ಕೆನರಾ ಬ್ಯಾಂಕ್‍ನಲ್ಲಿ ಹಣ ಜಮಾ ಮಾಡಲಾಗುವುದು. ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಿಕೊಳ್ಳಲು ಅವಕಾಶವಿದೆ’ ಎಂದು ಅವರು ತಿಳಿಸಿದರು.

ರಾಜಸ್ವ ನಿರೀಕ್ಷಕರಾದ ರಮೇಶ್, ಜಯಪ್ರಕಾಶ್, ಮುಜರಾಯಿ ಗುಮಾಸ್ತೆ ಚಂದ್ರಕಲಾ, ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಕೆ. ನರಸಿಂಹಮೂರ್ತಿ, ಕರಿಯಪ್ಪ, ಅಣ್ಣಪ್ಪ, ಚಂದ್ರಮ್ಮ, ಪಿ.ಟಿ. ಗೌರಮ್ಮ, ಎಸ್.ಎನ್. ಪ್ರಸನ್ನ, ಗ್ರಾ.ಪಂ. ಸದಸ್ಯ ಶ್ರೀನಾಥ್, ಗ್ರಾಮ ಲೆಕ್ಕಿಗರಾದ ಭರ್ಮಪ್ಪ, ದೊಡ್ಡೇಶ್, ಬಸವರಾಜ್ , ಕೆನರಾ ಬ್ಯಾಂಲ್‌ನ ಅಧಿಕಾರಿಗಳಾದ ರಾಮಣ್ಣ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT