ದಾವಣಗೆರೆ: ಪ್ರಚೋದನಾಕಾರಿ ಭಾಷಣ ಮಾಡಿರುವ ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ ಅವರ ವಿರುದ್ಧ ವಕೀಲ ಅನಿಶ್ ಪಾಷ ಅವರು ಇಲ್ಲಿನ ಬಡಾವಣೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ಶಾಸಕರು ತಮ್ಮ ಭಾಷಣದಲ್ಲಿ ಜಾತಿ–ಜಾತಿಗಳ ಮಧ್ಯೆ ಆಂತರಿಕ ಯುದ್ಧಕ್ಕೆ ಪ್ರಚೋದನೆ ನೀಡಿ ದೇಶದ ಭದ್ರತೆಗೆ ಧಕ್ಕೆ ತರುವ ಪ್ರಯತ್ನ ಮಾಡಿದ್ದಾರೆ. ಜನಪ್ರತಿನಿಧಿಗಳು ಸಂವಿಧಾನಬದ್ಧವಾಗಿ ಸಮಾನ ಹಿತದೃಷ್ಟಿಯಿಂದ ಜಾತಿ–ಧರ್ಮವನ್ನು ಬದಿಗಿಟ್ಟು ಯಾವುದೇ ತಾರತಮ್ಯವಿಲ್ಲದೇ ಸೇವಾ ಮನೋಭಾವ ಹೊಂದಿರಬೇಕು. ಆದರೆ ಪ್ರಚೋದನಾಕಾರಿ ಭಾಷಣ ಮಾಡುವುದು ಆತಂಕಕಾರಿ ಬೆಳವಣಿಗೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮಾದಿಗ ದಂಡೋರದ ಅಧ್ಯಕ್ಷ ಗುಡ್ಡಪ್ಪ, ಕತ್ತಲಗೆರೆ ತಿಪ್ಪಣ್ಣ, ಡಿಎಸ್ಎಸ್ ಮುಖಂಡ ಮಲ್ಲೇಶಪ್ಪ, ಜಸ್ಟಿನ್ ಜಯಕುಮಾರ್, ಆಂಜನೇಯ, ವೆಂಕಟೇಶ್ ಅವರು ರೆಡ್ಡಿ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.