ಶುಕ್ರವಾರ, ಜುಲೈ 30, 2021
21 °C
ದಾವಣಗೆರೆ ಜಿಲ್ಲಾ ವಾರ್ಷಿಕ ಪೊಲೀಸ್ ಕ್ರೀಡಾಕೂಟ

ಡಿಎಆರ್ ತಂಡಕ್ಕೆ ಸಮಗ್ರ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಇಲ್ಲಿನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಮುಕ್ತಾಯಗೊಂಡ 2019ರ ವಾರ್ಷಿಕ ಪೊಲೀಸ್ ಕ್ರೀಡಾಕೂಟದಲ್ಲಿ ದಾವಣಗೆರೆಯ ಜಿಲ್ಲಾ ಡಿಎಆರ್ ತಂಡ 2019ರ ಸಾಲಿನ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಪುರುಷರ ವಿಭಾಗದಲ್ಲಿ ಡಿಎಆರ್ ತಂಡದ ಎಪಿಸಿ ಎ.ಪಿ. ಜಯಣ್ಣ ಚಾಂಪಿಯನ್ ಪ್ರಶಸ್ತಿ ಪಡೆದರೆ, ಮಹಿಳೆಯರ ವಿಭಾಗದಲ್ಲಿ ಅರಸೀಕೆರೆಯ ಯುಪಿಸಿ ರೇಖಾ ಅವರು ಪಡೆದುಕೊಂಡರು. ದಾವಣಗೆರೆ ಗ್ರಾಮಾಂತರ ಠಾಣೆ ₹73.63 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳುವ ಮೂಲಕ ಬೆಸ್ಟ್ ಡಿಟೆಕ್ಟಿವ್ ಪೊಲೀಸ್ ಠಾಣೆ ಪ್ರಶಸ್ತಿ ಪಡೆದುಕೊಂಡಿತು.

ತೀವ್ರ ಕೂತುಹಲ ಕೆರಳಿಸಿದ್ದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ದಾವಣಗೆರೆ ಜಿಲ್ಲಾ ಶಸಸ್ತ್ರ ಮೀಸಲು ಪಡೆಯ ತಂಡ ಎರಡು ಸುತ್ತಿನಲ್ಲೂ ಜಯಗಳಿಸಿತು.

ದಾವಣಗೆರೆ ಪೂರ್ವ ವಲಯ ಐಜಿಪಿ ಅಮೃತ್ ಪಾಲ್ ಬಹುಮಾನ ವಿತರಿಸಿ ಮಾತನಾಡಿ, ‘ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆದವರು ಎಷ್ಟು ಮುಖ್ಯವೋ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರೂ ಅಷ್ಟೇ ಮುಖ್ಯ. ಏಕೆಂದರೆ ಸ್ಪರ್ಧೆ ಇಲ್ಲದಿದ್ದರೆ ಆತ ಮೊದಲ ಸ್ಥಾನ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಈ ಹಿಂದೆ ಸರಳವಾಗಿ ಆಡುತ್ತಿದ್ದಾಗ ಅಂತಹ ಉತ್ಸಾಹ ಇರಲಿಲ್ಲ. ಸ್ಪರ್ಧೆಗಳು ಇದ್ದಾಗ ಮಾತ್ರ ಗೆಲುವು ಸಾಧ್ಯ’ ಎಂದು ಹೇಳಿದರು.

‘ಸಾವಿರಾರು ವರ್ಷಗಳ ಹಿಂದೆಯೇ ಜಾವೆಲಿನ್ ಥ್ರೊ, ಡಿಸ್ಕಸ್‌ ಥ್ರೋ ಇರುವ ಬಗ್ಗೆ ಚಿತ್ರಗಳಲ್ಲಿ ಕೆತ್ತಲಾಗಿದೆ. ಅಂದಿನ ಕಾಲದಿಂದಲೇ ಕ್ರೀಡೆಗಳು ಇದ್ದವು ಎಂಬುದಕ್ಕೆ ಪುರಾವೆಗಳು ಇವೆ. 2700 ವರ್ಷಗಳ ಹಿಂದೆ ಗ್ರೀಸ್ ದೇಶದಲ್ಲಿನ ‘ಒಲಿಂಪಿಯಾ’ ಎಂಬ ಜಾಗದಲ್ಲಿ ಒಲಿಂಪಿಕ್ಸ್‌ಗಳು ಆರಂಭವಾದವು. ಹಲವಾರು ವರ್ಷಗಳು ಸ್ಥಗಿತಗೊಂಡ ಒಲಿಂಪಿಕ್ಸ್ 1896ರಲ್ಲಿ ಪುನರಾರಂಭವಾಯಿತು. ಕ್ರೀಡೆಗೆ ತನ್ನದೇ ಆದ ಮಹತ್ವ ಇದೆ’ ಎಂದು ಹೇಳಿದರು.

‘ಮನುಷ್ಯನ ದೇಹಕ್ಕೆ ದೈಹಿಕ ಚಟುವಟಿಕೆ ಅಗತ್ಯ. ಕ್ರೀಡೆಗಳಿಂದ ದೈಹಿಕ ಚಟುವಟಿಕೆಗೆ ಬರುತ್ತವೆ. ಸ್ಪರ್ಧೆಗಳು ಇದ್ದರೆ ಮಾತ್ರ ನಾವು ಶ್ರಮ ಪಡುತ್ತೇವೆ’ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ರಾಜೀವ್ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು