ದಾವಣಗೆರೆ: ಮೂರು ದಿನಗಳ ಹಿಂದೆ ಇಮಾಂ ನಗರದ ಮಹಿಳೆ (48) ಮೃತಪಟ್ಟಿದ್ದು, ಅವರಲ್ಲೂ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಇದು ಜಿಲ್ಲೆಯಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.

ಗೃಹಿಣಿಯಾಗಿರುವ ಈ ಮಹಿಳೆಗೆ (ಪಿ 651) ಉಸಿರಾಟದ ತೊಂದರೆ, ರಕ್ತದೊತ್ತಡ, ಮಧುಮೇಹ ಮತ್ತು ಹೈಪೋಥೈರಾಯ್ಡಿಸಂ ನಿಂದ ಬಳಲುತ್ತಿದ್ದು, ಮೇ 1ರಂದು ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ದಾಖಲಾಗಿದ್ದರು. ಮರುದಿನ ಮೃತಪಟ್ಟಿದ್ದರು. ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶೈತ್ಯಾಗಾರದಲ್ಲಿ ಇಡಲಾಗಿದೆ.

ಈ ಮಹಿಳೆಯ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಸೋಮವಾರ ಸಂಜೆ ಫಲಿತಾಂಶ ಬಂದಿದ್ದು, ಕೊರೊನಾ ವೈರಸ್ ಇರುವುದು ಖಚಿತಪಟ್ಟಿದೆ. ಪಿ.533 ಮಹಿಳೆಯ ದ್ವಿತೀಯ ಸಂಪರ್ಕ ಈ ಮಹಿಳೆಗೆ ಇತ್ತು ಎಂದು ಗುರುತಿಸಲಾಗಿದೆ.

ಜಿಲ್ಲೆಯಲ್ಲಿ ಚಿತ್ರದುರ್ಗದ ಮಹಿಳೆ ಸೇರಿ ಮೂವರು ಗುಣಮುಖರಾಗಿ ಮನೆಗೆ ಹೋಗಿದ್ದಾರೆ. ಸದ್ಯ ಇಬ್ಬರು ಮೃತಪಟ್ಟಿದ್ದು, ಸೋಂಕು ಸಕ್ರಿಯರಾಗಿರುವ 29 ಮಂದಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.