ದಾವಣಗೆರೆ: ಸಂಜೆಯ ನಸುಗೆಂಪು ಆವರಿಸಿ, ಹಕ್ಕಿಗಳೆಲ್ಲಾ ಗೂಡು ಸೇರುವ ಧಾವಂತದಲ್ಲಿದ್ದ ವೇಳೆ, ಇಲ್ಲಿನ ಶಕ್ತಿ ನಗರದ ಬನಶಂಕರಿ ದೇವಾಲಯದ ಎದುರು ನಿಂತಿದ್ದ ಸೊಗಸಾದ ರಥದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ದೇವಿಯ ಮುಖವು ಆಗತಾನೇ ಉದಯಿಸಿದ ಪೂರ್ಣಚಂದ್ರನ ಬೆಳಕಿನ ಹೊಂಬಣ್ಣದಲ್ಲಿ ಮಿಂಚುತ್ತಿತ್ತು.

ಬನದ ಹುಣ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಮೊದಲ ವರ್ಷದ ಬ್ರಹ್ಮ ರಥೋತ್ಸವವು ಭಕ್ತರ ಹರ್ಷೋದ್ಗಾರದ ನಡುವೆ ಶನಿವಾರ ಅದ್ದೂರಿಯಾಗಿ ನಡೆಯಿತು.

ದೇವಾಂಗ ಸಮಾಜದ ಬನಶಂಕರಿ ದೇವಸ್ಥಾನ ಸಮಿತಿ ಹಮ್ಮಿಕೊಂಡಿದ್ದ ರಥೋತ್ಸವಕ್ಕೆ ಆವರಗೊಳ್ಳ ಪುರುವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರು ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ರಥವು ಮುಂದೆ ಸಾಗುತ್ತಿದ್ದಂತೆಯೇ ಭಕ್ತರು ಅದರತ್ತ ಬಾಳೆಹಣ್ಣು ತೂರಿ ದೇವಿಗೆ ನಮಸ್ಕರಿಸಿದರು. ವಿದ್ಯುತ್ ದೀಪ ಹಾಗೂ ಪುಷ್ಪಗಳಿಂದ ಆಲಂಕೃತಗೊಂಡಿದ್ದ ರಥವನ್ನು ಎಳೆದು ಭಕ್ತರು ಪುನೀತರಾದರು.

ಡಿಸಿಎಂ ಬಡಾವಣೆಯ ಕಾಂಪೌಂಡ್ನಿಂದ ಶಕ್ತಿನಗರದ ಮುಖ್ಯ ರಸ್ತೆಯಲ್ಲಿ ಸಾಗಿದ ರಥ, ನಂಗರ ಭೀಷ್ಮ ವೃತ್ತ ತಲುಪಿ, ದೇವಸ್ಥಾನ ಆವರಣಕ್ಕೆ ರಥ ವಾಪಸಾಯಿತು. ಬದಾಮಿಯ ಬನಶಂಕರಿ ದೇವಸ್ಥಾನಕ್ಕೆ ಹೋಗಲಾರದವರು ಇಲ್ಲಿಯೇ ರಥೋತ್ಸವದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿರುವುದು ಖುಷಿಯ ಸಂಗತಿ ಎಂದು ಹೇಳಿದ ಭಕ್ತರೊಬ್ಬರು ಪುಳಕಿತರಾದರು.

ಮೊದಲ ರಥೋತ್ಸವ:

2012ರಲ್ಲಿ ಇಲ್ಲಿ ಬನಶಂಕರಿ ದೇವಸ್ಥಾನ ನಿರ್ಮಿಸಲಾಗಿದ್ದು, ಕಳೆದ ವರ್ಷವಷ್ಟೇ ರಥ ನಿರ್ಮಿಸುವ ಆಲೋಚನೆ ಮೊಳಕೆಯೊಡೆದಿತ್ತು. ಇದಕ್ಕಾಗಿ ದೇವಾಂಗ ಸಮುದಾಯ ಸೇರಿದಂತೆ ಎಲ್ಲ ವರ್ಗದ ಜನರು ರಥ ನಿರ್ಮಾಣಕ್ಕೆ ದೇಣಿಗೆ ನೀಡಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ರಂಗನಾಥ್ ಅವರ ಸಾರಥ್ಯದಲ್ಲಿ ಅಂದಾಜು ₹30 ಲಕ್ಷ ವೆಚ್ಚದಲ್ಲಿ ಮನಮೋಹಕ ರಥ ನಿರ್ಮಾಣವಾಯಿತು. ಹರಿಹರ ತಾಲ್ಲೂಕು ಹರಳಹಳ್ಳಿಯ ಎಚ್.ಎಂ. ಬಸವಣ್ಣಾಚಾರ್ ನೇತೃತ್ವದಲ್ಲಿ ಮೂರು ತಿಂಗಳ ಅವಧಿಯಲ್ಲಿ ರಥ ಸಿದ್ಧವಾಯಿತು. ತೇಗ, ಬೀಟೆ, ಹೊನ್ನೆ ಮೊದಲಾದ ಮರಗಳನ್ನು ಬಳಸಿ ಕಟ್ಟಲಾಗಿರುವ ರಥವನ್ನು ಆಕರ್ಷಕ ಕೆತ್ತನೆಯುಳ್ಳ ದೇವರ ಶಿಲ್ಪಗಳು ಆವರಿಸಿದ್ದು, ಮನೆಸೂರೆಗೊಳ್ಳುವಂತಿವೆ.

ಮುನ್ನಾದಿನ, ದೇವಿಗೆ ಶಾಖಾಂಬರಿ ಅಲಂಕಾರ ಪೂಜೆ ನೆರವೇರಿಸಲಾಗಿತ್ತು. ಆವರಗೊಳ್ಳ ಶ್ರೀಗಳು ರಥಕ್ಕೆ ಸ್ವರ್ಣಪೂರಕ ಪಂಚಗವ್ಯ ಶಾಂತಿ ಮಾಡಿದ್ದರು. ನಂತರ ಕುಂಭ ಲಗ್ನದಲ್ಲಿ ನೂತನ ರಥಕ್ಕೆ ಕಳಸಾರೋಹಣ ಮಾಡಲಾಗಿತ್ತು.

ರಥೋತ್ಸವಕ್ಕೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಾಹಿತಿ ಎ.ಬಿ. ರಾಮಚಂದ್ರಪ್ಪ ಉಪನ್ಯಾಸ ನೀಡಿದರು. ಬಿಜೆಪಿ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್, ದೇವಸ್ಥಾನ ಸಮಿತಿ ದೇವಾಂಗ ಸಮಾಜದ ಅಧ್ಯಕ್ಷ ಎಸ್. ರಂಗನಾಥ್, ಗೌರವ ಸಲಹೆಗಾರರಾದ ಗೋವಿಂದಪ್ಪ ಎಂ.ಎಲ್., ಹಿರೇಗಂಗೂರು ನಾಗಪ್ಪ, ಉಪಾಧ್ಯಕ್ಷರಾದ ಮುಕುಂದಪ್ಪ, ಆರ್. ನರಸಿಂಹಪ್ಪ, ಕಾರ್ಯದರ್ಶಿ ಕೆ. ಜಯಣ್ಣ, ಸಹ ಕಾರ್ಯದರ್ಶಿ ಟಿ. ಕೆಂಚಪ್ಪ, ಬಾಪು ಗೌಡ, ವಾರ್ತಾ ಇಲಾಖೆ ನಿವೃತ್ತ ನೌಕರ ಬಸವರಾಜ್ ಇತರರು ಭಾಗವಹಿಸಿದ್ದರು.

ಶಾಮನೂರು ಕುಟಂಬ ಹಾಗೂ ದೇವಾಂಗ ಸಮುದಾಯದ ನಡುವೆ ಆಪ್ತ ಸಂಬಂಧವಿದೆ. ರಥೋತ್ಸವದ ಮೂಲಕ ಸಂಸ್ಕೃತಿ ಪರಂಪರೆಯನ್ನು ಹೊಸ ತಲೆಮಾರಿಗೆ ದಾಟಿಸಬೇಕಿದೆ
ಡಾ. ಪ್ರಭಾ ಮಲ್ಲಿಕಾರ್ಜುನ್ ಸಂಸದೆ

ಜಾತ್ಯತೀತರಾಗಿ ಅಪಾರ ಭಕ್ತರು ದೇವಿಯ ಜಾತ್ರೆಗೆ ಸೇರಿದ್ದಾರೆ. ಮುಂದಿನ ದಿನಗಳಲ್ಲಿ ಬನಶಂಕರಿ ಸಮುದಾಯದ ಭವನ ನಿರ್ಮಾಣವಾಗಲಿ ಎಂದು ಆಶಿಸುತ್ತೇನೆ
ಓಂಕಾರ ಶಿವಾಚಾರ್ಯ ಸ್ವಾಮೀಜಿ ಆವರಗೊಳ್ಳ ಪುರುವರ್ಗ ಹಿರೇಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.