ಬುಧವಾರ, ಜನವರಿ 19, 2022
23 °C
ಕುಟುಂಬಗಳ ಮನವೊಲಿಸಿದ ಉಪತಹಶೀಲ್ದಾರ್

ಸಾಸ್ವೆಹಳ್ಳಿ: ಲಸಿಕೆ ಹಾಕಿಸಿಕೊಳ್ಳದ ಕುಟುಂಬಗಳ ವಿದ್ಯುತ್‌ ಸಂಪರ್ಕ ಕಡಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಹಳ್ಳಿ (ಸಾಸ್ವೆಹಳ್ಳಿ): ಗ್ರಾಮದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ಕುಟುಂಬವೂ ಸೇರಿ 10ಕ್ಕೂ ಹೆಚ್ಚು ಕುಟುಂಬಗಳ ವಿದ್ಯುತ್‌ ಸಂಪರ್ಕವನ್ನು ಉಪತಹಶೀಲ್ದಾರ್ ಕಡಿತ ಮಾಡಿಸಿ, ಎಚ್ಚರಿಕೆ ನೀಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ಮನೆಯಲ್ಲಿ 6 ಜನ ಸದಸ್ಯರಿದ್ದಾರೆ. ಯಾರೂ ಲಸಿಕೆ ಪಡೆಯದಿದ್ದರಿಂದ ಅಧಿಕಾರಿಗಳು ಮನೆಯ ಬಾಗಿಲಿಗೆ ಬಂದು ಲಸಿಕೆ ಹಾಕಿಸಿಕೊಳ್ಳುವಂತೆ ತಿಳಿಹೇಳಿದರು. ಉಪಾಧ್ಯಕ್ಷರ ಪತಿ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದರು. ಉಪತಹಶೀಲ್ದಾರ್ ಬಂದು ಮಾಹಿತಿ ನೀಡಿದರೂ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದಾಗ ಉಪಾಧ್ಯಕ್ಷರ ಮನೆಯ ಜೊತೆ ಲಸಿಕೆ ಹಾಕಿಸಿಕೊಳ್ಳದ 10ಕ್ಕೂ ಹೆಚ್ಚು ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು.

ಬಳಿಕ ಜಾಗೃತಿ ಮೂಡಿಸಿದ ಉಪತಹಶೀಲ್ದಾರ್ ಎಸ್.ಪರಮೇಶ್ ನಾಯ್ಕ್ ಲಸಿಕೆ ಹಾಕುವಲ್ಲಿ ಯಶಸ್ವಿಯಾದರು. ಆನಂತರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು