ಹೊನ್ನಾಳಿ: ‘ಪಟ್ಟಣದ ಬಳಿಯ ತುಂಗಭದ್ರಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಾಗ ಈ ಭಾಗದ ನಿವಾಸಿಗಳ ಮನೆಗೆ ನೀರು ನುಗ್ಗಿ ಆಗುತ್ತಿದ್ದ ಸಮಸ್ಯೆಗೆ ಪರಿಹಾರ ನೀಡುವ ಉದ್ದೇಶದಿಂದ ತಡೆಗೋಡೆ ನಿರ್ಮಾಣಕ್ಕಾಗಿ ಸರ್ಕಾರ ಎಸ್ಡಿಆರ್ಎಫ್ ನಿಧಿಯಲ್ಲಿ ₹ 6.50 ಕೋಟಿ ಅನುದಾನ ಬಿಡುಗಡೆ ಮಾಡಿದೆ’ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ಸೋಮವಾರ ಪಟ್ಟಣದ ಬಾಲ್ರಾಜ್ಘಾಟ್ಗೆ ಹೊಂದಿಕೊಂಡಂತಿರುವ ತುಂಗಭದ್ರಾ ನದಿಗೆ ತಡೆಗೋಡೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಪ್ರತಿವರ್ಷ ಮಳೆಗಾಲದಲ್ಲಿ ಪ್ರವಾಹದಿಂದ ತುಂಗಭದ್ರಾ ನದಿ ನೀರಿನ ಮಟ್ಟ ಹೆಚ್ಚಾಗಿ ಮನೆಗಳಿಗೆ ನೀರು ನುಗ್ಗುತ್ತಿತ್ತು, ಇದರಿಂದ ಅಲ್ಲಿನ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸುವ ಕೆಲಸ ನಡೆಯುತ್ತಿತ್ತು. ಇದು ಕಳೆದ 20 ವರ್ಷದಿಂದಲೂ ನಡೆದುಕೊಂಡು ಬಂದಿದ್ದು, ಸಾಕಷ್ಟು ತೊಂದರೆಯಾಗುತ್ತಿತ್ತು. ಇದನ್ನು ಮನಗಂಡು ನಾನು ತಡೆಗೋಡೆ ನಿರ್ಮಾಣಕ್ಕಾಗಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವು’ ಎಂದು ಹೇಳಿದರು.

‘ಕಾಮಗಾರಿ ಕಳಪೆಯಾಗದಂತೆ ಸ್ಥಳೀಯರು ನೋಡಿಕೊಳ್ಳಬೇಕು ಮತ್ತು ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಬೇಕು’ ಎಂದು ಗುತ್ತಿಗೆದಾರನಿಗೆ ತಾಕೀತು ಮಾಡಿದರು.

‘ತಡೆಗೋಡೆಯು 240 ಮೀಟರ್ ಉದ್ದ ಹಾಗೂ 10 ಮೀಟರ್ ಎತ್ತರ ನಿರ್ಮಾಣಗೊಳ್ಳಲಿದೆ. ಆಗ ನದಿ ನೀರಿನಮಟ್ಟ ಎಷ್ಟೇ ಎತ್ತರಕ್ಕೆ ಬಂದರೂ ನದಿಪಾತ್ರದ ಜನತೆಗೆ ತೊಂದರೆಯಾಗುವುದಿಲ್ಲ, ಹಾಗೂ ಕಾಳಜಿ ಕೇಂದ್ರ ಆರಂಭಿಸುವ ಪ್ರಮೇಯವೇ ಬರುವುದಿಲ್ಲ’ ಎಂದು ಹೇಳಿದರು.

‘ಇದೇ ರೀತಿ ಗ್ರಾಮೀಣ ಪ್ರದೇಶದಲ್ಲಿರುವ ತುಂಗಭದ್ರಾ ನದಿ ಪಾತ್ರದಲ್ಲಿ ಕೆಲವು ಕಡೆಗಳಲ್ಲಿ ತಡೆಗೋಡೆ ನಿರ್ಮಾಣ ಅವಶ್ಯವಾಗಿ ಮಾಡಲೇಬೇಕಾಗಿದೆ. ಆ ಭಾಗದಲ್ಲಿಯೂ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸುವುದಾಗಿ’ ತಿಳಿಸಿದರು.

‘ಗದುಗಿನಿಂದ ಹೊನ್ನಾಳಿ ರಸ್ತೆ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿದ್ದು, ಸರ್ಕಾರ ನಿಗದಿ ಮಾಡಿರುವ ರೀತಿಯಲ್ಲೇ ಆಗಲಿದೆ. ವಿಸ್ತರಣೆಯಲ್ಲಿ ಏನಾದರೂ ಲೋಪ ಕಂಡು ಬಂದರೆ ನಾನೇ ಖುದ್ದಾಗಿ ಪರಿಶೀಲಿಸುತ್ತೇನೆ. ವ್ಯತ್ಯಾಸವಾಗಿದ್ದು ಕಂಡು ಬಂದರೆ, ನಾನೇ ನಿಂತು ಸರಿಪಡಿಸುವೆ’ ಎಂದು ಭರವಸೆ ನೀಡಿದರು.

ಅಧಿಕಾರ ಸ್ವೀಕರಿಸಿದ ಹೊನ್ನಾಳಿ ನೂತನ ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ, ತಹಶೀಲ್ದಾರ್ ರಾಜೇಶ್ ಕುಮಾರ್, ಪುರಸಭೆ ಅಧ್ಯಕ್ಷ ಮೈಲಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಸುರೇಶ್, ಪುರಸಭೆ ಸದಸ್ಯರಾದ ಧರ್ಮಪ್ಪ, ಬಾಬು ಹೋಬಳದಾರ್, ರಾಜೇಂದ್ರ, ಮುಖ್ಯಾಧಿಕಾರಿ ಟಿ. ಲೀಲಾವತಿ, ಪುರಸಭೆ ನಾಮಿನಿ ಸದಸ್ಯರಾದ ರವಿ, ರೇವಣಸಿದ್ದಪ್ಪ, ಮಾದಪ್ಪ, ಮುಖಂಡರಾದ ವಿಜೇಂದ್ರಪ್ಪ, ಗುಂಡ ಚಂದ್ರು, ಗಿರೀಶ್, ಬಿ.ಸಿದ್ದಪ್ಪ, ಎಚ್.ಎ.ಉಮಾಪತಿ, ಆರ್.ನಾಗಪ್ಪ ಇತರರು ಇದ್ದರು.

ಹೊನ್ನಾಳಿ ಪಟ್ಟಣದ ಬಾಲರಾಜ್ ಘಾಟ್ ಗೆ ಹೊಂದಿಕೊಂಡಿರುವ ತುಂಗಭದ್ರಾ ನದಿಗೆ ತಡೆಗೋಡೆ ನಿರ್ಮಾಣಕ್ಕೆ ಭೂಮಿ ಪೂಜೆ | ತಡೆಗೋಡೆ ನಿರ್ಮಾಣಕ್ಕೆ $ 6.50 ಕೋಟಿ ಬಿಡುಗಡೆ | ಇನ್ನುಮುಂದೆ ಕಾಳಜಿ ಕೇಂದ್ರ ತೆರೆಯುವ ಅವಶ್ಯಕತೆ ಇಲ್ಲ : ಶಾಸಕ ಡಿ.ಜಿ. ಶಾಂತನಗೌಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.