ಶುಕ್ರವಾರ, 22 ಆಗಸ್ಟ್ 2025
×
ADVERTISEMENT
ADVERTISEMENT

ದಾವಣಗೆರೆ: ಬರ್ತಿದ್ದಾನೆ ಗಣಪ, ಸಿದ್ಧಗೊಳ್ಳುತ್ತಿವೆ ಮಂಟಪ

Published : 22 ಆಗಸ್ಟ್ 2025, 6:22 IST
Last Updated : 22 ಆಗಸ್ಟ್ 2025, 6:22 IST
ಫಾಲೋ ಮಾಡಿ
Comments
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಬದರಿನಾಥ ದೇಗುಲದ ಮಾದರಿಯಲ್ಲಿ ಮಹಾಮಂಟಪ ಸಿದ್ಧಗೊಳ್ಳುತ್ತಿದೆ
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಬದರಿನಾಥ ದೇಗುಲದ ಮಾದರಿಯಲ್ಲಿ ಮಹಾಮಂಟಪ ಸಿದ್ಧಗೊಳ್ಳುತ್ತಿದೆ
ನಿತ್ಯವೂ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇವೆ. ಸದ್ಯ ಮಣ್ಣು ಸುಣ್ಣ ಹಾಗೂ ಪೇಪರ್‌ ಪಲ್ಪ್‌ ಬಳಸಿ ತಯಾರಿಸಿದ ಮೂರ್ತಿಗಳ ಮಾರಾಟ ಮಾತ್ರ ಕಂಡುಬಂದಿದೆ
ಜಗದೀಶ್ ಎಇಇ (ಆರೋಗ್ಯ) ಮಹಾನಗರ ಪಾಲಿಕೆ
ಹೈಸ್ಕೂಲ್ ಮೈದಾನದಲ್ಲಿ ಬದರಿನಾಥ ಮಹಾಮಂಟಪ 
ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್‌ನಿಂದ ಈ ಬಾರಿ ಉತ್ತರಾಖಂಡ ರಾಜ್ಯದ ಬದರಿನಾಥ ದೇಗುಲದ ಮಾದರಿಯಲ್ಲೇ ಮಹಾಮಂಟಪವನ್ನು ನಿರ್ಮಿಸಲಾಗುತ್ತಿದೆ. ಕೋಲ್ಕತ್ತ ಮೂಲದ 30 ಕ್ಕೂ ಹೆಚ್ಚು ಕಾರ್ಮಿಕರು ಜುಲೈ 23ರಿಂದಲೇ ಭವ್ಯ ಮಂಟಪ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ.  ‘ಈ ಬಾರಿ ಬೆಳಗಾವಿಯಿಂದ 16 ಅಡಿ ಎತ್ತರದ ‘ಪಂಚಮುಖಿ ಗಣೇಶ’ ಮೂರ್ತಿಯನ್ನು ತರಿಸಲಾಗುತ್ತಿದ್ದು 25 ದಿನ ಪ್ರತಿಷ್ಠಾಪಿಸಲಾಗುವುದು. ಅದ್ದೂರಿ ಮಹಾಮಂಟಪದಲ್ಲಿ ನಿತ್ಯವೂ ‘ಬದ್ರಿ ನಾರಾಯಣ ರೂಪಕ’ ಪ್ರದರ್ಶನ ಇರಲಿದೆ. ಸೆಪ್ಟೆಂಬರ್ 20ರಂದು ಪ್ರಮುಖ ಮಾರ್ಗಗಳಲ್ಲಿ ಮೆರವಣಿಗೆ ನಡೆಸಿ ಮೂರ್ತಿ ವಿಸರ್ಜನೆ ನಡೆಸಲಾಗುವುದು’ ಎಂದು ಹಿಂದೂ ಮಹಾಗಣಪತಿ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಜೊಳ್ಳಿ ಗುರು ತಿಳಿಸಿದರು.
ಸಿ.ಸಿ.ಟಿ.ವಿ ಕ್ಯಾಮೆರಾ ಕಡ್ಡಾಯ 
ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಗಣೇಶ ಮಂಟಪಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಪೊಲೀಸ್ ಇಲಾಖೆ ಸೂಚಿಸಿದೆ. ಬ್ಯಾನರ್‌ ಫ್ಲೆಕ್ಸ್‌ ಅಳವಡಿಕೆಗೂ ಪಾಲಿಕೆಯಿಂದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.  ಕಳೆದ ವರ್ಷ ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳನ್ನು ಕಟ್ಟುವ ವಿಚಾರದಲ್ಲಿ ಸಂಘರ್ಷ ಉಂಟಾಗಿತ್ತು. ಎರಡು ಗಣೇಶ ಮೂರ್ತಿಗಳನ್ನೂ  ಕಿಡಿಗೇಡಿಗಳು ಕಳವು ಮಾಡಿದ್ದರು. ಹೀಗಾಗಿ ಈ ಬಾರಿ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಎಸ್‌ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.  ಪ್ರತೀ ವರ್ಷದಂತೆ ಈ ಬಾರಿಯೂ ಜಿಲ್ಲಾಡಳಿತ ಡಿ.ಜೆ ಬಳಕೆಗೆ ನಿಷೇಧ ಹೇರಿದೆ. ಆದರೆ ಅದು ಎಷ್ಟರಮಟ್ಟಿಗೆ ಪಾಲನೆಯಾಗುತ್ತದೆ ಎಂಬುವುದೇ ಪ್ರಶ್ನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT