ನ್ಯಾಮತಿ: ತಾಲ್ಲೂಕಿನ ಶಿಕಾರಿಪುರ–ಸವಳಂಗ ರಸ್ತೆಯ ಮಾಚಿಗೊಂಡನಹಳ್ಳಿ ಗ್ರಾಮದ ಬಸ್ ನಿಲ್ದಾಣ ಮುಂಭಾಗ ಇಬ್ಬರು ಬೈಕ್ ಸವಾರರನ್ನು ಬಂಧಿಸಿ, ಅವರ ಬಳಿ ಇದ್ದ ಗಾಂಜಾವನ್ನು ಮಂಗಳವಾರ ವಶಕ್ಕೆ ಪಡೆಯಲಾಗಿದೆ.

ಶಿಕಾರಿಪುರದ ಅಖಿಯಾಜ್ ಅಹಮ್ಮದ್(54) ಮತ್ತು ಹಾರನಹಳ್ಳಿ ಗ್ರಾಮದ ಸೈಯದ್ ಶಫೀವುಲ್ಲಾ (58) ಬಂಧಿತ ಆರೋಪಿಗಳು. ಹಾವೇರಿಯ ಮೌಲಾ ತಲೆಮರೆಸಿಕೊಂಡಿರುವ ಆರೋಪಿ.

ಆರೋಪಿಗಳಿಂದ 1ಕೆ.ಜಿ.160ಗ್ರಾಂ ತೂಕದ (1,160) ಅಂದಾಜು ₹ 1,10,000 ಮೌಲ್ಯದ ಗಾಂಜಾಸೊಪ್ಪು, ಒಂದು ಬೈಕ್, ಒಂದು ಮೊಬೈಲ್ಲನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಎನ್.ಎಸ್. ರವಿ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಎಸ್ಪಿ ಕಚೇರಿಯ ಪಿಎಸ್ಐ ಸಾಗರ್ ಅತ್ತಾರ್ವಾಲಾ, ಅಬಕಾರಿ ಉಪಾಧೀಕ್ಷಕ ಹೊನ್ನಾಳಿ ವಿಭಾಗದ ಮುರಡೇಶ, ಪಿಡಿಒ ಜಿ.ಬಿ. ವಿಜಯಕುಮಾರ, ನೀರಗಂಟಿ ಪ್ರಶಾಂತ, ಸಿಬ್ಬಂದಿ ಮಂಜಪ್ಪ, ನಾಗರಾಜನಾಯ್ಕ, ಪ್ರವೀಣ, ಶಿವರಾಜ, ಗೋವಿಂದರಾಜು, ಮಂಜಪ್ಪ, ಷಣ್ಮುಖ ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.