ಹರಿಹರ: ನಗರದ ಬೆಸ್ಕಾಂ ವಿಭಾಗೀಯ ಉಗ್ರಾಣದಲ್ಲಿ ಕೋಟ್ಯಂತರ ಮೌಲ್ಯದ ಸಾಮಗ್ರಿಗಳ ದುರುಪಯೋಗ ಮಾಡಿರುವ ಆರೋಪದ ಮೇಲೆ ಸಹಾಯಕ ಉಗ್ರಾಣ ಪಾಲಕ (ಅಸಿಸ್ಟೆಂಟ್ ಸ್ಟೋರ್ ಕೀಪರ್) ಅರುಣಕುಮಾರ್ ಜಿ.ಎನ್. ಹಾಗೂ ಇತರರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

2018ರ ಜೂನ್ 19ರಿಂದ 2025ರ ಸೆಪ್ಟೆಂಬರ್ 16ರವರೆಗೆ ಹರಿಹರ ಬೆಸ್ಕಾಂ ಉಗ್ರಾಣದಲ್ಲಿ ಸಹಾಯಕ ಉಗ್ರಾಣ ಪಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಆರೋಪಿ ಅರುಣಕುಮಾರ್, ಲೆಡ್ಜರ್ ದಾಖಲೆಗಳಲ್ಲಿ ಸಾಮಗ್ರಿಗಳು ನೈಜವಾಗಿ ಉಗ್ರಾಣದಲ್ಲಿರುವಂತೆ ನಮೂದಿಸಿ, ಅವುಗಳನ್ನು ಹೊರಕ್ಕೆ ಸಾಗಿಸಿ ದುರುಪಯೋಗ ಮಾಡಿಕೊಂಡಿರುವ ಹಾಗೂ ಗ್ಯಾರಂಟಿ ಅವಧಿಯಲ್ಲಿದ್ದ ಪರಿವರ್ತಕಗಳನ್ನು ದುರಸ್ತಿ ಕೇಂದ್ರಗಳಿಗೆ ಕಳುಹಿಸದೆ, ಇನ್ವಾಯ್ಸ್ ಸಂಖ್ಯೆಗಳನ್ನು ಮಾತ್ರ ಲೆಡ್ಜರ್ನಲ್ಲಿ ದಾಖಲಿಸಿ ವಂಚನೆ ಮಾಡಿರುವ ಬಗ್ಗೆ ಆರೋಪ ಕೇಳಿಬಂದಿದೆ.

ವಿವರ: 2025ರ ಏಪ್ರಿಲ್ನಲ್ಲಿ ತ್ರೈಮಾಸಿಕ ಪರಿಶೀಲನೆ ನಡೆಸಿದ ಆಂತರಿಕ ಲೆಕ್ಕಪರಿಶೋಧಕರು, ಪರಿವರ್ತಕ ತೈಲದಲ್ಲಿ (ಟಿ.ಸಿ. ಆಯಿಲ್) 89,270 ಲೀಟರ್ ಕೊರತೆ ಕಂಡುಬಂದಿದ್ದು, ಸಂಸ್ಥೆಗೆ ₹ 56,67,864 ನಷ್ಟ ಉಂಟಾಗಿದೆ ಎಂದು ವರದಿ ನೀಡಿದ್ದರು.

ಈ ವರದಿ ಹಿನ್ನೆಲೆಯಲ್ಲಿ ಮೇಲಧಿಕಾರಿಗಳು ಉಗ್ರಾಣದಲ್ಲಿ ಸಾಮಗ್ರಿಗಳ ಎಣಿಕೆ ಕಾರ್ಯ ಕೈಗೊಂಡು, ಲೆಡ್ಜರ್ ದಾಖಲೆಗಳನ್ನು ಹೋಲಿಕೆ ಮಾಡಿದಾಗ ಒಟ್ಟು 39 ವಿಧದ ಸಾಮಗ್ರಿಗಳಲ್ಲಿ ಭಾರಿ ಕೊರತೆ ಕಂಡು ಬಂದಿತ್ತು.

ವರದಿಯಲ್ಲಿ ವಿವರಿಸಿದಂತೆ ₹ 56.67 ಲಕ್ಷ ಮೌಲ್ಯದ 89,270 ಲೀಟರ್ ಪರಿವರ್ತಕ ತೈಲ ದುರುಪಯೋಗ ಮಾತ್ರವಲ್ಲದೆ ₹ 72.58 ಲಕ್ಷ ಮೌಲ್ಯದ 102 ಪರಿವರ್ತಕಗಳು ಬಫರ್ ಸ್ಟಾಕ್ನಿಂದ ಕಣ್ಮರೆಯಾಗಿದ್ದವು. ಇದಲ್ಲದೆ ₹ 12.75 ಲಕ್ಷ ಮೌಲ್ಯದ 21 ಪರಿವರ್ತಕಗಳು ಲೆಡ್ಜರ್ನಲ್ಲಿ ದುರಸ್ತಿದಾರರಿಗೆ ಇನ್ವಾಯ್ಸ್ ಮಾಡಿದಂತೆ ದಾಖಲಾಗಿದ್ದರೂ ವಾಸ್ತವದಲ್ಲಿ ದುರಸ್ತಿದಾರರಿಗೆ ಹಸ್ತಾಂತರವಾಗಿರಲಿಲ್ಲ.

ಈ ರೀತಿಯಾಗಿ ಒಟ್ಟಾರೆ ₹ 3.85 ಕೋಟಿ ಮೌಲ್ಯದ ಸಾಮಗ್ರಿಗಳನ್ನು ದುರುಪಯೋಗ ಮಾಡಲಾಗಿದೆ ಎಂಬುದು ಪರಿಶೀಲನೆಯಿಂದ ದೃಢಪಟ್ಟಿದ್ದು, ಕಾನೂನು ಕ್ರಮ ಜರುಗಿಸಬೇಕು ಎಂದು ಬೆಸ್ಕಾಂನ ಕಾರ್ಯ ನಿರ್ವಾಹಕ ಎಂಜಿನಿಯರ್ ರವಿಕಿರಣ ದೂರಿನಲ್ಲಿ ವಿವರಿಸಿದ್ದಾರೆ.

ವಿಶ್ವಾಸ ಘಾತುಕತನ, ಸಾರ್ವಜನಿಕ ನೌಕರನಾಗಿ ಸ್ವತ್ತಿನ ದುರುಪಯೋಗ, ಮೋಸ, ವಂಚನೆ ಮುಂತಾದ ಬಿಎನ್ಎಸ್ ಕಲಂಗಳಡಿ ಸೋಮವಾರ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.