1ಇಪಿ : 2ಇಪಿ : ಹೊನ್ನಾಳಿ ತಾಲ್ಲೂಕು ಮಾಸಡಿ ಗ್ರಾಮದಲ್ಲಿ ನೂರು ವರ್ಷದ ಬಳಿಕ ಆಚರಿಸಲಾಗುತ್ತಿರುವ ಮಾರಿಕಾಂಬೆ ದೇವಿಯ ಚಿತ್ರ.
ಅಮ್ಮನ ಉತ್ಸವ 6ರಿಂದ
ಜನವರಿ 6 ರಂದು ಬೆಳಿಗ್ಗೆ 10 ರಿಂದ 3 ಗಂಟೆಯ ತನಕ ಅಮ್ಮನಿಗೆ ಉಡಿತುಂಬುವ ಕಾರ್ಯಕ್ರಮ ನಂತರ 4 ಗಂಟೆಗೆ ಚಂಡೆ ವಾದ್ಯಮೇಳ ಡೊಳ್ಳು ಅಸಾದಿಗಳೊಂದಿಗೆ ಅಮ್ಮನ ಭವ್ಯವಾದ ಮೆರವಣಿಗೆ ನಡೆಯಲಿದ್ದು ನಂತರ ವಿದ್ಯುತ್ ಅಲಂಕೃತ ಮಂಟಪದೊಳಗೆ ದೇವಿಯನ್ನು ತರಲಾಗುವುದು. ಜ. 7 ರಂದು ಬೆಳಿಗ್ಗೆ ಬೇವುಬೇಟೆ ಕಾರ್ಯಕ್ರಮ ಜರುಗಲಿದೆ. ನಂತರ ಹುಲುಸಿನ ಕಾಳು ವಿತರಿಸುವ ಕಾರ್ಯಕ್ರಮ ಜರುಗಲಿದೆ. 8 ರಂದು ದೇವಿಗೆ ಶಾಂತಿ ನಂತರ ಗುಡಿತುಂಬುವ ಕಾರ್ಯಕ್ರಮಗಳು ನಡೆಯಲಿದೆ. 9 ರಂದು ದೇವಿಗೆ ಹೊಸದಾಗಿ ಉಡಿತುಂಬುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8 ಗಂಟೆಗೆ ಶಿವಮೊಗ್ಗದ ಸುಷ್ಮಾ ಮೆಲೊಡಿ ಆರ್ಕೆಷ್ಟ್ರಾ ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಭಕ್ತರು ತಮ್ಮ ತನುಮನಧನ ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಗಜೇಂದ್ರಪ್ಪ ಮನವಿ ಮಾಡಿದರು.