ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊನ್ನಾಳಿಯಲ್ಲಿ ಅದ್ದೂರಿ ರಥೋತ್ಸವ 

Published 22 ಆಗಸ್ಟ್ 2024, 15:41 IST
Last Updated 22 ಆಗಸ್ಟ್ 2024, 15:41 IST
ಅಕ್ಷರ ಗಾತ್ರ

ಹೊನ್ನಾಳಿ: ದ್ವಿತೀಯ ಮಂತ್ರಾಲಯವೆಂದೇ ಪ್ರಸಿದ್ಧಿ ಪಡೆದಿರುವ ಇಲ್ಲಿನ ಮಠದಲ್ಲಿ, ಗುರುರಾಯರ ಆರಾಧನಾ ಮಹೋತ್ಸವದ ಅಂಗವಾಗಿ ಗುರು ರಾಘವೇಂದ್ರ ಸ್ವಾಮಿಗಳ ಬೆಳ್ಳಿ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ಸಡಗರ, ಸಂಭ್ರಮದಿಂದ ಜರುಗಿತು.

ಮೂರು ದಿನಗಳಿಂದ ಗುರುರಾಯರ ಪೂರ್ವಾರಾಧನೆ, ಮಧ್ಯಾರಾಧನೆ ಹಾಗೂ ಉತ್ತರರಾಧನೆ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶುಕ್ರವಾರ ಪವಮಾನಹೋಮ ಹಾಗೂ ಅಭಿನಂದನಾ ಕಾರ್ಯಕ್ರಮಗಳು ಮಠದಲ್ಲಿ ಜರುಗಲಿವೆ ಎಂದು ಮಠದ ನಿರ್ದೇಶಕರಾದ ಎಚ್.ಎನ್. ಗುರುದತ್ತ ಹಾಗೂ ಸಿ. ಸತ್ಯನಾರಾಯಣ ಅವರು ತಿಳಿಸಿದ್ದಾರೆ.

ರಾಘವೇಂದ್ರ ಸೇವಾ ಟ್ರಸ್ಟ್‌ ಅಧ್ಯಕ್ಷ ಎಚ್.ಎಂ.ಶ್ರೀನಿವಾಸ್‌ಮೂರ್ತಿ, ಉಪಾಧ್ಯಕ್ಷ ಕೆ.ಆರ್.ಶ್ರೀನಿವಾಸ್, ಕಾರ್ಯದರ್ಶಿ ವಾದಿರಾಜ್ ಕಮರೂರು, ನಿರ್ದೇಶಕರಾದ ಎನ್.ಜಯರಾವ್, ಎಂ.ವಿ.ಬದರಿನಾರಾಯಣ್, ಬಿ.ರಾಘವೇಂದ್ರಚಾರ್ ಹಾಗೂ ಎಸ್.ಎನ್.ಪ್ರಕಾಶ್ ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT