ಹರಿಹರ: ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ತಾಲೂಕಿನ ಎಲ್ಲಾ ಇಲಾಖಾಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಶಾಸಕ ಬಿ.ಪಿ.ಹರೀಶ್ ಸೂಚಿಸಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಜ್ಯೋತ್ಸವ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಈ ಬಾರಿಯ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಬೇಕು, ಕನ್ನಡ ನಾಡು ಮತ್ತು ನುಡಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗಿದೆ’ ಎಂದು ಹೇಳಿದರು.

‘ಅಧಿಕಾರಿಗಳು, ಕನ್ನಡ ಸಂಘ, ಸಂಸ್ಥೆಯವರನ್ನು ಒಳಗೊಂಡ ಸಮಿತಿ ರಚಿಸಿ, ಅವರ ಸಲಹೆ ಸೂಚನೆ ಪಡೆದು ಕನ್ನಡದ ಹಬ್ಬವನ್ನು ಭವ್ಯವಾಗಿ ಆಚರಿಸಬೇಕು. ಸಭೆಯಲ್ಲಿ ಹಾಜರಿದ್ದ ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಚ್.ಎಸ್.ಹೂಗಾರ್, ಕಾರ್ಮಿಕ ಮುಖಂಡ ಎಚ್.ಕೆ. ಕೊಟ್ರಪ್ಪ, ಎ.ರಿಯಾಜ್ ಅಹ್ಮದ್ ಇತರರನ್ನು ಒಳಗೊಂಡ ಸಮಿತಿಯನ್ನು ರಚಿಸಿ, ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಿ’ ಎಂದು ಸೂಚಿಸಿದರು.

‘ರಾಜ್ಯೋತ್ಸವದ ವೇದಿಕೆಗೆ ಮಯೂರವರ್ಮ ಹೆಸರಿಡಬೇಕು. ಶಿಕ್ಷಣ ಇಲಾಖೆಯಿಂದ ಆಯೋಜಿಸಲ್ಪಡುವ ಸ್ತಬ್ಧಚಿತ್ರಗಳಲ್ಲಿ ಮೈಸೂರಿನ ಹುಲಿ ಎಂದೇ ಪ್ರಸಿದ್ಧರಾದ ಟಿಪ್ಪು ಸುಲ್ತಾನ್ ಅವರ ಸ್ತಬ್ಧಚಿತ್ರವೂ ಇರಬೇಕು, ನಗರಸಭೆಗೆ ಸೇರಿದ ಕಟ್ಟಡಗಳಿಗೆ ದೀಪಾಲಂಕಾರ ಮಾಡಬೇಕು’ ಎಂದು ಕರುನಾಡ ಕದಂಬ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಎಚ್.ಸುಧಾಕರ್ ಸಲಹೆ ನೀಡಿದರು.

ಮಳೆ ಕಾರಣಕ್ಕೆ ಕೆಸರುಮಯವಾಗಿರುವ ಗಾಂಧಿ ಮೈದಾನದಲ್ಲಿ ನೀರು ನಿಲ್ಲದಂತೆ ಮಾಡಿ, ಮೆರವಣಿಗೆ ಸಾಗುವ ಮಾರ್ಗವನ್ನು ಸ್ವಚ್ಛಗೊಳಿಸಬೇಕು’ ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ್ ಮಾನೆ ಸಲಹೆ ನೀಡಿದರು.

ನಿಯೋಜಿತ ತಹಶೀಲ್ದಾರ್ ಎಚ್.ಬಿ.ಪ್ರಭಾಕರ್ ಗೌಡ, ಬಿಇಒ ಡಿ.ದುರುಗಪ್ಪ, ನಗರಸಭೆ ಎಇಇ ವಿನಯ್ ಕುಮಾರ್, ಪಿಎಸ್ ಐ ಶ್ರೀಪತಿ ಗಿನ್ನಿ, ವಿವಿಧ ಇಲಾಖಾಧಿಕಾರಿಗಳಾದ ಡಾ.ಅಬ್ದುಲ್ ಖಾದರ್, ನಟರಾಜ್, ಪ್ರಿಯದರ್ಶಿನಿ, ಜೆ.ಕವಿತಾ, ಅಸ್ಮಾ ಭಾನು, ಕೆ.ಆರ್.ಶಿವಕುಮಾರ್, ಹನುಮಂತಪ್ಪ ಲಮಾಣಿ ಸೆರಿದಂತೆ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.