ದಾವಣಗೆರೆ: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 31ನೇ ದಕ್ಷಿಣ ಭಾರತ ಮಟ್ಟದ ಪುರುಷ ಮತ್ತು ಮಹಿಳೆಯರ ಕೊಕ್ಕೊ ಚಾಂಪಿಯನ್ಷಿಪ್ ಸ್ಪರ್ಧೆಯಲ್ಲಿ ಕರ್ನಾಟಕದ ಪುರುಷ ಮತ್ತು ಮಹಿಳಾ ತಂಡಗಳು ಫೈನಲ್ ಪ್ರವೇಶಿಸಿವೆ.

ರೌಂಡ್ ರಾಬಿನ್ ಮಾದರಿಯಲ್ಲಿ ತಲಾ 4 ಪಂದ್ಯಗಳಲ್ಲಿ ಉಭಯ ವಿಭಾಗಗಳ ತಂಡಗಳು ಜಯ ಸಾಧಿಸಿವೆ. ಎರಡೂ ವಿಭಾಗಗಳಲ್ಲಿ ಕೇರಳ ರಾಜ್ಯದ ತಂಡಗಳು ಭಾನುವಾರ ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ತಂಡಗಳ ವಿರುದ್ಧ ಸೆಣಸಾಡಲಿವೆ.

ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಶುಕ್ರವಾರ 13 ಪಂದ್ಯಗಳು, ಶನಿವಾರ 18 ಪಂದ್ಯಗಳು ನಡೆದವು. ಕೊನೆಯ ದಿನ (ಅ.26) ಫೈನಲ್ ಸೇರಿದಂತೆ 5 ಪಂದ್ಯಗಳು ನಡೆಯಲಿವೆ.

ಪುರುಷರ ವಿಭಾಗದಲ್ಲಿ ಕೇರಳ ತಂಡವು ತಮಿಳುನಾಡು ತಂಡವನ್ನು 41–25ರಿಂದ ಮಣಿಸಿತು. ಕರ್ನಾಟಕ ತಂಡವು ತೆಲಂಗಾಣ ತಂಡವನ್ನು 23–16ರಿಂದ ಸೋಲಿಸಿತು. ತೆಲಂಗಾಣ ತಂಡವು ತಮಿಳುನಾಡು ತಂಡವನ್ನು 30–27ರಿಂದ ಸೋಲುಣಿಸಿತು.

ಇನ್ನೊಂದು ಪಂದ್ಯದಲ್ಲಿ ಕರ್ನಾಟಕ ತಂಡವು ಆಂಧ್ರಪ್ರದೇಶದ ವಿರುದ್ಧ 39 –24ರಿಂದ ಜಯ ಸಾಧಿಸಿತು. ಆಂಧ್ರಪ್ರದೇಶ ತಂಡ ತಮಿಳುನಾಡು ವಿರುದ್ಧ 30–26ರಿಂದ ಜಯಭೇರಿ ಬಾರಿಸಿತು. ಕೇರಳ ತಂಡವು ತೆಲಂಗಾಣ ವಿರುದ್ಧ 28–22ರಿಂದ ವಿಜಯ ಸಾಧಿಸಿತು.

ಕರ್ನಾಟಕ ತಂಡವು 5 ನಿಮಿಷ ಕಾಲಾವಕಾಶ ಇರುವಂತೆ 6 ಅಂಕಗಳೊಂದಿಗೆ ತಮಿಳುನಾಡು ವಿರುದ್ಧ ಜಯ ಸಾಧಿಸಿತು. ಕರ್ನಾಟಕ ತಂಡದ ಪರ ನಾಯಕ, ದಾವಣಗೆರೆಯ ಮಹಮ್ಮದ್ ತಾಸೀನ್, ಬೆಳಗಾವಿಯ ಆದಿತ್ಯ ಪಾಟೀಲ, ಬೆಂಗಳೂರಿನ ವಿಶಾಲ್ ಹಾಗೂ ಜೀವನ್ ಉತ್ತಮ ಪ್ರದರ್ಶನ ನೀಡಿದರು.

ಕರ್ನಾಟಕದ ಮಹಿಳಾ ತಂಡವು ತಮಿಳುನಾಡು ವಿರುದ್ಧ ಒಂದು ಇನ್ನಿಂಗ್ಸ್ ಹಾಗೂ 5 ಅಂಕಗಳಿಂದ ಜಯ ಸಾಧಿಸಿ ಫೈನಲ್ ತಲುಪಿತು. ತಂಡದ ಪರ ಮೈಸೂರಿನ ಚೈತ್ರಾ ಹಾಗೂ ಮೋನಿಕಾ, ಬೆಂಗಳೂರಿನ ಮಾನ್ಯ, ಮಂಗಳೂರಿನ ಶೀತಲ್ ಉತ್ತಮ ಪ್ರದರ್ಶನ ನೀಡಿದರು.

ಮಹಿಳಾ ವಿಭಾಗದ ಇನ್ನುಳಿದ ಪಂದ್ಯಗಳಲ್ಲಿ ಪುದುಚೇರಿ ವಿರುದ್ಧ ಆಂಧ್ರಪ್ರದೇಶ ತಂಡ 32–4ರಿಂದ, ತೆಲಂಗಾಣ ವಿರುದ್ಧ ಕರ್ನಾಟಕ 40–6ರಿಂದ, ತಮಿಳುನಾಡು ವಿರುದ್ಧ ಕೇರಳ 27–21ರಿಂದ, ತೆಲಂಗಾಣ ವಿರುದ್ಧ ತಮಿಳುನಾಡು 28–9ರಿಂದ, ಪುದುಚೇರಿ ವಿರುದ್ಧ ಕೇರಳ 52–8ರಿಂದ ಜಯ ಸಾಧಿಸಿದವು.

ಕರ್ನಾಟಕ ತಂಡವು ಆಂಧ್ರಪ್ರದೇಶ ತಂಡದ ವಿರುದ್ಧ 41–2ರಿಂದ, ತಮಿಳುನಾಡು ತಂಡ ಆಂಧ್ರಪ್ರದೇಶ ವಿರುದ್ಧ 28–6ರಿಂದ, ಕೇರಳ ತಂಡ ತೆಲಂಗಾಣ ವಿರುದ್ಧ 23–12ರಿಂದ, ಕರ್ನಾಟಕ ತಂಡ ಪುದುಚೇರಿ ವಿರುದ್ಧ 57–14ರಿಂದ ಜಯ ಗಳಿಸಿದವು.

ದಕ್ಷಿಣ ಭಾರತ ಕೊಕ್ಕೊ ಸಮಿತಿ, ರಾಜ್ಯ ಕೊಕ್ಕೊ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕ್ರೀಡಾ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಚಾಂಪಿಯನ್ಷಿಪ್ ಆಯೋಜಿಸಿದ್ದು, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಹಾಗೂ ಪುದುಚೇರಿಯ ಪುರುಷ ಹಾಗೂ ಮಹಿಳೆಯರ ತಲಾ 6 ತಂಡಗಳು ಭಾಗವಹಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.